ಮಂತ್ರಾಲಯದಲ್ಲಿ ರೂಮ್ ಬುಕ್ಕಿಂಗ್ ಈಗ ಆನ್ ಲೈನ್

ಮಂತ್ರಾಲಯ ಮಠದ ಧಾರ್ಮಿಕ ಆಗುಹೋಗುಗಳನ್ನು ತಿಳಿಯಪಡಿಸುವ ಮಂತ್ರಾಲಯ ಮಠದ ವೆಬ್ ತಾಣದ ಮೂಲಕ ಮುಂಗಡವಾಗಿ 2 ರೂಮ್ ಗಳನ್ನು ಬುಕ್ ಮಾಡಬಹುದು. ಸದ್ಯಕ್ಕೆ ಇದು ಪ್ರಾಯೋಗಿಕ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ವೆಬ್ ವ್ಯವಸ್ಥಾಪಕ ರಘುನಂದನಾಚಾರ್ಯ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಶೀಘ್ರದಲ್ಲೇ ಹೊಸ ರೂಪದಲ್ಲಿ ಆನ್ ಲೈನ್ ಪೋರ್ಟಲ್ ಲೋಕಾರ್ಪಣೆಯಾಗುತ್ತಿದೆ.ಈಗ ತಾತ್ಕಾಲಿಕವಾದ ವ್ಯವಸ್ಥೆ ನೀಡಲಾಗಿದೆ. ಆಸಕ್ತರು ಈ ಕೊಂಡಿ ಬಳಸಿ ರೂಮ್ ಬುಕ್ ಮಾಡಬಹುದು.
ಇದರ ಜೊತೆಗೆ ಹಲವು ಭಾಷೆಗಳಲ್ಲಿ ಪಂಚಾಂಗವನ್ನು ಡೌನ್ ಲೋಡ್ ಮಡಿಕೊಳ್ಳಬಹುದು. ಭಕ್ತಾದಿಗಳ ಅನುಕೂಲಕ್ಕಾಗಿ ಏಕಾದಶಿ, ಹುಣ್ಣಿಮೆ, ಅಮಾವಸ್ಯೆ ಹಾಗೂ ರಾಯರ ಮಠದಲ್ಲಿ ಜರಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಲಾಗಿದೆ.
ರಾಯರ ಆರಾಧನೆ, ಯುಗಾದಿ ಪೂರ್ವ ತಯಾರಿ ಚಿತ್ರ ಸಂಗ್ರಹವನ್ನು ಸಹ ವೆಬ್ ತಾಣದಲ್ಲಿ ನೋಡಬಹುದು.












Click it and Unblock the Notifications