ಯಡಿಯೂರಪ್ಪಗೆ ಸಿಎಂ ಪಟ್ಟ: ಸದಾನಂದ ವಾರ್ನಿಂಗ್
ಬೆಂಗಳೂರು,ಮಾ.8:
ಯಡಿಯೂರಪ್ಪ ಸಿಎಂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಕಟ್ಟಾಳುಗಳು ತಲೆಗೊಂದರಂತೆ ಹೇಳಿಕೆ ನೀಡುತ್ತಿದ್ದಾರೆ. 'ಬಿಎಸ್ ವೈ ಅವರನ್ನು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಿಸುವುದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಷಯ' ಎಂದು ನಾನು ಹೇಳಿಕೆ ನೀಡಿರುವುದು ನಿಜ. ಆ ಹೇಳಿಕೆಗೆ ನಾನು ಈಗಲೂ ಬದ್ಧ. ಆದರೆ ಇದರ ವಿರುದ್ಧ ಶಾಸಕರು, ಮಂತ್ರಿಗಳು ಮಾತನಾಡುತ್ತಿರುವುದು ಸರ್ವತಾ ಸಾಧುವಲ್ಲ. ಎಚ್ಚರಾ, ಎಚ್ಚರ... ಎಂದು ಸದಾನಂದ ಗೌಡರು ಕೆಂಗಣ್ಣು ಬೀರಿದ್ದಾರೆ. id="toptextpromo">'ನಾನೂ
ಮಾತು ತಿರುಚುವವನಲ್ಲ. ಚೆನ್ನಾಗಿ ಯೋಚನೆ ಮಾಡಿಯೇ ಮಾತನಾಡುವುದು. ನನ್ನಲ್ಲಿ ಹೇಳಲು ಏನೂ ಇಲ್ಲ ಅಂದಾಗ no comments ಅಂತ ನಿಮ್ಮ ಮುಂದೆ ಹೇಳುತ್ತೇನೆ. ಸುಮ್ಮನೇ ಅನಗತ್ಯದ ಆತಂಕ, ಗೊಂದಲ ಸೃಷ್ಟಿಸುವುದು ಬೇಡ' ಎಂದು ಸುದ್ದಿಗಾರರಿಗೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಾರೂ
ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುವಂತಿಲ್ಲ. ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಯಾರೂ ಅದನ್ನು ಉಲ್ಲಂಘಿಸುವಂತಿಲ್ಲ. ಇದನ್ನು ಮೊನ್ನೆ ಗೆಸ್ಟ್ ಲೈನ್ ರೆಸಾರ್ಟಿನಲ್ಲಿ ಪಕ್ಷದ ಅಧ್ಯಕ್ಷ ಗಡ್ಕರಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಆ ಮಾತಿಗೆ ಎಲ್ಲರೂ ಬದ್ಧವಾಗಿರಬೇಕು ಎಂದು ಸದಾನಂದರು ಫರ್ಮಾನು ಹೊರಡಿಸಿದರು.











Click it and Unblock the Notifications