ಕಿಂಗ್ ಫಿಷರ್ ಏರ್ ಲೈನ್ಸ್ ಮುಚ್ಬಿಡುತ್ತೀವಿ ಅಷ್ಟೇ!

40 ಬ್ಯಾಂಕ್ ಖಾತೆಗಳು ಮುಟ್ಟುಗೋಲು ಹಾಕಿಕೊಂಡರೂ, ಮುಂದಿನ ವಾರದೊಳಗೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ವಿಜಯ್ ಮಲ್ಯ ಭರವಸೆ ನೀಡಿದ್ದಾರೆ.
ಈ ನಡುವೆ, ಪೈಲಟ್ ಗಳ ನಡುವೆ ನಡೆದ ಸಭೆಯಲ್ಲಿ, ಬಾಕಿ ಇರುವ ಸಂಬಳ ನೀಡದ ಹೊರೂ ವಿಮಾನ ಏರುವುದಿಲ್ಲ ಎಂದು ಪೈಲಟ್ ಗಳು ಮುಷ್ಕರ ಹೂಡಿರುವುದು ಸಿಇಒ ಸಂಜಯ್ ಗೆ ದಿಕ್ಕು ತೋಚದಂತೆ ಮಾಡಿದೆ.
ಸೇವಾ ತೆರಿಗೆ ಇಲಾಖೆ ನೀಡಿದ ಗಡುವು ಮೀರಿದ್ದು 40 ಕೋಟಿ ಬಾಕಿ ಕಟ್ಟಲು ಸಹ ಆಗದೆ ಕಿಂಗ್ ಫಿಷರ್ ಹೆಣಗಾಡುತ್ತಿದೆ. ಈ ಸಂದರ್ಭದಲ್ಲಿ ಸಂಬಳ ಹೇಗೆ ನೀಡಲು ಸಾಧ್ಯ ಎಂದು ಕೆಲ ಪೈಲಟ್ ಗಳು ಪ್ರಶ್ನಿಸುತ್ತಿದ್ದಾರೆ.
ಬ್ಯಾಂಕ್ ಖಾತೆ ಮುಟ್ಟುಗೋಲು ನಿಲ್ಲಿಸಿದರೆ ಮಾತ್ರ ಸಂಬಳ ನೀಡಲು ಸಾಧ್ಯ ಎಂದು ಮಲ್ಯ ಹೇಳುತ್ತಿದ್ದಾರೆ. ಈ ಎಲ್ಲಾ ಗೊಂದಲಗಳ ಮಧ್ಯೆ ಕಿಂಗ್ ಫಿಷರ್ ಮುಚ್ಚುವ ಬಗ್ಗೆ ಸಿಇಒ ಸಂಜಯ್ ಹೇಳಿರುವುದು ಬರೀ ಬೆದರಿಕೆಯೋ ಅಥವಾ ನಿಜವಾಗಿ ಮುಚ್ಚಿಬಿಡುತ್ತಾರೋ ತಿಳಿದಿಲ್ಲ. ಸಂಸ್ಥೆ ಮುಚ್ಚುವುದು ಅಷ್ಟು ಸುಲಭವಲ್ಲ ಎಂಬುದು ಸಂಜಯ್ ಗೂ ಗೊತ್ತಿದೆ.












Click it and Unblock the Notifications