ಸಂಜೆ 6ರೊಳಗೆ ವರದಿ ನೀಡಿ ಎಂದ ಸಿಎಂ ಸದಾನಂದ

ಘಟನೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸದಾನಂದ ಗೌಡರು ಹೇಳಿದ್ದಾರೆ.
ಸಭೆ ಬಳಿಕ ಹೈಕೋಟ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರೊಡನೆ ಗೃಹಸಚಿವ ಆರ್ ಅಶೋಕ್ ಅವರು ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿ ತಿಳಿಗೊಳ್ಳುವವರೆಗೂ ಗೃಹ ಸಚಿವರು ಹಾಗೂ ಪೊಲೀಸ್ ಆಯುಕ್ತರು ಬೆಂಗಳೂರಿನಲ್ಲೇ ಉಳಿದುಕೊಳ್ಳಬೇಕು ಎಂದು ಸಿಎಂ ಸದಾನಂದ ಸೂಚಿಸಿದ್ದಾರೆ.
ಎಲ್ಲಾ ಮಾಧ್ಯಮದ ಪ್ರಮುಖರು, ರಾಜ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ , ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ, ಡಿಸಿಪಿ ಶಂಕರ್ ಬಿದರಿ, ಗೃಹಸಚಿವ ಆರ್ ಅಶೋಕ್ ಮುಂತಾದರು ಭಾಗವಹಿಸಿದ್ದರು.
ಮಾಧ್ಯಮದವರ ಮೇಲೆ ವಕೀಲರಿಗೆ ಇದ್ದ ಆಕ್ರೋಶಕ್ಕೆ ಅಮಾಯಕ ಪೊಲೀಸರು, ಸಾರ್ವಜನಿಕರು ತೀವ್ರ ಹೊಡೆತ ತಿಂದಿದ್ದಾರೆ.












Click it and Unblock the Notifications