ಚಿನ್ನದ ಬೆಲೆ ಸಡನ್ ಆಗಿ ಕೊಂಚ ಇಳಿಕೆ

ಕಳೆದ 19 ವಾರಗಳಲ್ಲಿನ ಅತ್ಯಧಿಕ ಮತ್ತು ದಿಢೀರ್ ಬೆಲೆ ಹೆಚ್ಚಳ ಕೊಂಡಿದ್ದ ಚಿನ್ನದ ಬೆಲೆ ಇಳಿಕೆಯಾಗಿದೆ. ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 29,080 ರುಪಾಯಿ ಇದ್ದದ್ದು ಗುರುವಾರ 28,900.00(24K ಬೆಂಗಳೂರಿನಲ್ಲಿ) 26,500.00(22K) ಇಳಿದಿದೆ.
ಆದರೆ, ಉಳಿದ ನಗರಗಳಲ್ಲಿ ಸ್ಪಾಟ್ ಚಿನ್ನದ ಬೆಲೆ ಇನ್ನಷ್ಟು ಕೆಳಗಿಳಿದು ಪ್ರತಿ 10 ಗ್ರಾಂ ಬೆಲೆ 27,630 ರು ಆಗಿದೆ. ಯುರೋಪ್ ಮಾರುಕಟ್ಟೆಯ ಆರ್ಥಿಕತೆ ಏರಿಳಿತ ಇದಕ್ಕೆ ಕಾರಣ ಎನ್ನಲಾಗಿದೆ.
Multi Commodity Exchange(MCX )ವರದಿಯಂತೆ 27,945 ರು ದಿಂದ 28,140 ರು ತನಕ ವಹಿವಾಟು ನಡೆದಿದೆ. ಬೆಳ್ಳಿ ಪ್ರತಿ ಕೆಜಿಗೆ 57,944 ದಿಂದ 58,226 ರು ತನಕ ಇದೆ.
ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವವರಿಗೆ ಇದು ಶುಭ ಸೂಚಕವಾಗಿದೆ. ಆದರೆ, ಚಿನ್ನದ ಮೇಲೆ ಬಂಡವಾಳ ಹೂಡಲು ಮುಂದಾಗಿದ್ದವರಿಗೆ ಕೊಂಚ ಹಿನ್ನೆಡೆ ಉಂಟಾಗಿದೆ.












Click it and Unblock the Notifications