ಬೆಂಗಳೂರು ಗೃಹರಕ್ಷಕ ದಳ ನೇಮಕಾತಿಗೆ ಅರ್ಜಿ

ನಾಳೆ (ಫೆ. 29) ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ನಗರದ ಮೈಸೂರು ಸರ್ಕಲ್ಲಿನಲ್ಲಿರುವ ಸಿಎಆರ್ ಪೆರೇಡ್ ಮೈದಾನದಲ್ಲಿ ನೇಮಕಾತಿ ಅರ್ಜಿಯನ್ನು ಉಚಿತವಾಗಿ ವಿತರಿಸಲಾಗುವುದು. ತಾಂತ್ರಿಕ ಕೌಶಲ್ಯಗಳಾದ ವಾಹನ ಚಾಲನೆ, ಎಲೆಕ್ಟ್ರಿಷಿಯನ್, ಟೈಲರಿಂಗ್, ಪ್ಲಂಬರ್ ಕೆಲಸಗಳಲ್ಲಿ ನೈಪುಣ್ಯ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಗೃಹರಕ್ಷಕರಿಗೆ ದಿನಕ್ಕೆ ನಗರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ರೂ. 200 ಮತ್ತು ತಾಲ್ಲೂಕು ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ರೂ. 175 ಕರ್ತವ್ಯ ಭತ್ಯೆ ಹಾಗೂ ಕವಾಯತು ಸಂದರ್ಭಗಳಲ್ಲಿ ಪ್ರತಿ ಕವಾಯತಿಗೆ 22.50 ರೂಪಾಯಿಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ.
ಕನಿಷ್ಠ 4 ನೇ ತರಗತಿ ಉತ್ತೀರ್ಣರಾಗಿರುವ, ಕನಿಷ್ಠ 20 ವರ್ಷದಿಂದ ಗರಿಷ್ಠ 50 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗೃಹರಕ್ಷಕ ದಳಕ್ಕೆ ಸೇರ ಬಯಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೂ ಆದ್ಯತೆ ಇದೆ. ಪುರುಷ ಅಭ್ಯರ್ಥಿಯು ಕನಿಷ್ಠ 170 ಸೆಂ.ಮೀ ಹಾಗೂ ಮಹಿಳಾ ಅಭ್ಯರ್ಥಿಗಳು 165 ಸೆಂ.ಮೀ. ಎತ್ತರವಿರಬೇಕು ಮತ್ತು ನಿಗದಿತ ದೂರದ ಓಟವನ್ನು ನಿಗದಿತ ಅವಧಿಯೊಳಗೆ ಕ್ರಮಿಸಬೇಕು. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿಯನ್ನು ವಿತರಿಸಲಾಗುವುದು.
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಸಮಾದೇಷ್ಟರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು ಅಥವಾ ಕಚೇರಿ ದೂರವಾಣಿ ಸಂಖ್ಯೆ 2314 2542 ಅನ್ನು ಸಂಪರ್ಕಿಸಬಹುದು.












Click it and Unblock the Notifications