ಗುಟ್ಕಾ, ಪಾನ್ ಮಸಾಲ ನಿಷೇಧ: ಕೇಂದ್ರ ಸರ್ಕಾರ

ಆಹಾರ ಪ್ಯಾಕೇಜಿಂಗ್ ಮಾಡುವಾಗ ಗುಟ್ಕಾವನ್ನು ಕೂಡಾ ಆಹಾರ ಪದಾರ್ಥಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸ್ಪಷ್ಟನೆ ಕೇಳಿದ್ದೇವೆ. ಗುಟ್ಕಾ ಆಹಾರ ಪಟ್ಟಿಗೆ ಸೇರುವುದಾದರೆ, Food Safety and Standards Act ಪ್ರಕಾರ ಅದು ಅಕ್ರಮವಾಗುತ್ತದೆ.
ತಂಬಾಕು, ಜರ್ದಾಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಆಹಾರಗಳ ಪಟ್ಟಿಗೆ ಸೇರಿಸುಮ್ತಿಲ್ ಎಂದು ಎಲ್ಲಾ ರಾಜ್ಯಗಳಿಗೂ ಸದ್ಯದಲ್ಲೇ ಸೂಚನೆ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಕೆ ದೆಸೈರಾಜು ಅವರು ಹೇಳಿದ್ದಾರೆ.
PFA ಕಾಯಿದೆ 29(v) ಪ್ರಕಾರ ಪಾನ್ ಮಸಾಲ, ಗುಟ್ಕಾ, ಸುಪಾರಿ ತಿನ್ನಬಹುದಾದ ಪದಾರ್ಥ ಎಂದು ಮಾರಾಟಕ್ಕೆ ಲಭ್ಯವಿದೆ.
ಆದರೆ, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಶಾಸನ ವಿಧಿಸಿದ ಎಚ್ಚರಿಕೆ ಪಾಲನೆಯಾಗಬೇಕು. ಧೂಮಪಾನ ರಹಿತ ತಂಬಾಕು ಸೇವನೆ ಭಾರತದಲ್ಲಿ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಈ ಚಟಕ್ಕೆ ತುತ್ತಾಗಿದ್ದಾರೆ.












Click it and Unblock the Notifications