ರಸೆಲ್ ಮಾರ್ಕೆಟ್ ಸಂತ್ರಸ್ತರ ಕೈ ಹಿಡಿದ ಕೃಷ್ಣ

ಬೆಂಗಳೂರಿನಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಹೊಸ ಜವಾಬ್ದಾರಿ ಹೊತ್ತಿರುವ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರಿಗೆ ರಸೆಲ್ ಮಾರ್ಕೆಟ್ ಅಗ್ನಿ ದುರಂತ ಮೊದಲ ಅಸೈನ್ಮೆಂಟ್ ಆಗಿ ಸಿಕ್ಕಿತ್ತು.
ಕೃಷ್ಣ ಅವರು ಕೂಡಾ ಜಾಣತನದಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ಸಂಸದರ ನಿಧಿಯಿಂದ 1 ಕೋಟಿ ರು ಪರಿಹಾರ ಧನ ಘೋಷಿಸಿದರು.
ಶಿವಾಜಿನಗರದ ಶಾಸಕ ಎಂ. ರೋಶನ್ ಬೇಗ್, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಮೋಟಮ್ಮ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಕಿರಿಯ ನಾಯಕರು ತಮ್ಮ ಕ್ಷೇತ್ರದ ಜನತೆಯ ನೋವಿಗೆ ಸ್ಪಂದಿಸಲು ಧಾವಿಸಿದರು.
ಇದಕ್ಕೂ ಮುನ್ನ ಪ್ರತಿ ವ್ಯಾಪಾರಿಗೆ ತಲಾ 50 ಸಾವಿರ ರು. ಪರಿಹಾರ ನೀಡುವುದಾಗಿ ಸದಾನಂದ ಗೌಡರ ಸರ್ಕಾರ ಘೋಷಿಸಿತ್ತು.
ಮಾರ್ಕೆಟ್ ಪುನರ್ ನಿರ್ಮಾಣಕ್ಕೆ ವಿರೋಧ: ಸ್ಥಳಕ್ಕೆ ಭೇಟಿ ನೀಡಿರುವ ಬೆಂಗಳೂರು ಆಯುಕ್ತ ಎಂ.ಕೆ. ಶಂಕರಲಿಂಗೇ ಗೌಡ ಅವರು, ವ್ಯಾಪಾರಗಳು, ಶಾಸಕರು ಹಾಗೂ ಸ್ಥಳೀಯರೊಡನೆ ಚರ್ಚಿಸಿ ರಸೆಲ್ ಮಾರ್ಕೆಟ್ ಪುನರ್ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಸ್ಥಳೀಯ ವ್ಯಾಪಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಬಿಬಿಎಂಪಿಗೆ ತಲೆನೋವು ತಂದಿದೆ. ಮಾರ್ಕೆಟ್ ಹಾಗೂ ಅದನ್ನು ನಂಬಿಕೊಂಡಿರುವ ಜನರ ಉದ್ಧಾರದ ಕಾರ್ಯದ ಗುತ್ತಿಗೆಯನ್ನು ಕಾಂಗ್ರೆಸ್ ಪಡೆದುಕೊಂಡಂತ್ತಿದೆ.












Click it and Unblock the Notifications