ಇಲ್ಲಿ ನಾನೇ ಕಿಂಗ್, ನಾನೇ ಕಿಂಗ್ ಮೇಕರ್ : ಯಡ್ಡಿ

ಚುನಾವಣೆಯ ಸಿದ್ಧತೆಯಲ್ಲಿರುವ ಬಿಜೆಪಿಗೆ ತಾನು ಯಾರು ತನ್ನ ಶಕ್ತಿ ಎಷ್ಟು ಎಂಬುದನ್ನು ಮನವರಿಕೆ ಮಾಡಿಕೊಡುವ ಅಗತ್ಯತೆ ಯಡಿಯೂರಪ್ಪ ಅವರಿಗೆ ಇದೆ. ಶಾಸಕರ ಸಭೆ ಕರೆದು 45-50ರಷ್ಟು ಬೆಂಬಲವಿದೆ ಎಂದು ತೋರಿಸಿರುವುದು ಸದಾನಂದ ಗೌಡರ ಸರ್ಕಾರ ಪತನಗೊಳಿಸುವ ಉದ್ದೇಶದಿಂದ ಅಲ್ಲ ಎಂಬುದನ್ನು ಗಮನಿಸಬೇಕು.
ಯಡ್ಡಿ ನಡೆ ಇಂದಿನ ಉದ್ದೇಶ: ಭೂ ಹಗರಣದಲ್ಲಿ ಸಿಲುಕಿರವ ಯಡಿಯೂರಪ್ಪ ಅವರು ನಿರಪರಾಧಿ ಎಂದು ಸಾಬೀತಾಗುವವರೆಗೂ ಅವರಿಗೆ ಸಿಎಂ ಪಟ್ಟ ಮರಳಿ ನೀಡುವುದು ಬೇಡ ಎಂದು ಎಲ್ ಕೆ ಅಡ್ವಾಣಿ ಪಟ್ಟು ಹಿಡಿದಿರುವುದರಿಂದ ತಕ್ಷಣಕ್ಕೆ ಸಿಎಂ ಪಟ್ಟ ಸಿಗುವುದು ಅನುಮಾನ.
* ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ, ಅಶೋಕ್ ಅವರನ್ನು ಡಿಸಿಎಂ ಸ್ಥಾನಕ್ಕೇರಿಸುವುದರ ಮೂಲಕ ಯಡಿಯೂರಪ್ಪ ಕಿಂಗ್ ಮೇಕರ್ ಆಗಲು ಯತ್ನಿಸುತ್ತಿದ್ದಾರೆ.
* ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ನಾಯಕರನ್ನು ಒಲಿಸಿಕೊಳ್ಳಲು ಈ ತಂತ್ರಗಾರಿಕೆ.
* ಸಮುದಾಯ ನಾಯಕತ್ವದ ಪರ ಬ್ಯಾಟಿಂಗ್ ಮಾಡುತ್ತಿದ್ದ ಈಶ್ವರಪ್ಪ ಇದ್ದಕ್ಕಿದ್ದಂತೆ ಯಡಿಯೂರಪ್ಪ ಮನೆ ಬಾಗಿಲಿಗೆ ಬರಲು ಕಾರಣ ಹೊರ ಬಿದ್ದಿದೆ.
* ಯಡಿಯೂರಪ್ಪ ಹೇಳಿದಂತೆ ಕೇಳಿದರೆ ಈಶ್ವರಪ್ಪ ಅವರ ರಾಜ್ಯಾಧ್ಯಕ್ಷ ಸ್ಥಾನ ಹಾಗೇ ಉಳಿಯಲಿದೆ. ಇಲ್ಲಿದಿದ್ದರೆ ಯಡ್ಡಿ ಹೇಳಿದವರಿಗೆ ಈಶ್ವರಪ್ಪ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.
ಶ್ರೀರಾಮುಲು ಪಕ್ಷ, ಎನ್ ಸಿಪಿ, ಕರ್ನಾಟಕ ಮಕ್ಕಳ ಪಕ್ಷದ ಕಡೆ ಯಡ್ಡಿ ತಲೆ ಹಾಕುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಪ್ರತಿಷ್ಠೆ ಉಳಿಸಿಕೊಡುತ್ತೇನೆ. ನನ್ನ ಬೇಡಿಕೆಗಳಿಗೆ ಒಪ್ಪಿಕೊಳ್ಳಿ ಎಂದು ಯಡಿಯೂರಪ್ಪ ಅಂತಿಮವಾಗಿ ಹೇಳಿದ್ದಾರೆ. ಈಗ ಹೈಕಮಾಂಡ್ ಮತ್ತದೇ ಶಾಸಕರ ಅಭಿಪ್ರಾಯ, ಶೀಘ್ರದಲ್ಲೇ ನಿರ್ಣಯ ಪ್ರಕಟಿಸುತ್ತೇವೆ ಎಂದು ತಡ ಮಾಡಿದರೆ ಸರ್ಕಾರ ಹಾಗೂ ಲೋಕಸಭಾ ಕ್ಷೇತ್ರ ಕಳೆದುಕೊಳ್ಳಬೇಕಾಗುತ್ತದೆ.












Click it and Unblock the Notifications