ಬಿಜೆಪಿ ಐದು ಮಂತ್ರ ಗಾಳಿಗೆ ತೂರಿದ ಬಿಎಸ್ ವೈ

ಬಿಜೆಪಿ ಹೈಕಮಾಂಡ್ ನೀಡಿದ ನಿಯಮಗಳನ್ನು ಪಾಲಿಸದೆ ಕೇವಲ ಶಾಸಕರಾಗಿರುವ ಯಡಿಯೂರಪ್ಪ ಅವರು ಶಾಸಕರ ಸಭೆ ಕರೆಯುತ್ತಾರೆ ಹಾಗೂ ಅದಕ್ಕೆ ಎಲ್ಲ ಬಿಜೆಪಿ ಶಾಸಕರು ಪಾಲ್ಗೊಳ್ಳುತ್ತಾರೆ. ಆದರೂ ಹೈಕಮಾಂಡ್ ಏನು ಮಾಡಲಾಗದೆ ಯಡ್ಡಿ ಹಾಕುವ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ.
ಕಾರಣ.. ಶಾಸಕಾಂಗ ಸಭೆಯನ್ನು ಔತಣಕೂಟ ಎಂದು ಹೆಸರಿಸಿ ಜಾಣತನ ಮೆರೆದ ಯಡಿಯೂರಪ್ಪ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳದ ಹೈಕಮಾಂಡ್ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲಿಗೆ ಬಿಜೆಪಿ ವಿಧಿಸಿದ್ದ ಕಟ್ಟಾಜ್ಞೆಗಳನ್ನು ಗಮನಿಸಿ:
1. ಪಕ್ಷದಲ್ಲಿನ ಆಂತರಿಕ ಕಚ್ಚಾಟಕ್ಕೆ ಮುಕ್ತಾಯ ಹಾಡಬೇಕು. ಐಕ್ಯತೆ ಮೆರೆಯಬೇಕು.
2. ವಿವಾದಿತ ಹೇಳಿಕೆ ಕೊಡುವುದನ್ನು ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ನಿಲ್ಲಿಸಬೇಕು.
3. ಪಕ್ಷದ ಗೌರವಕ್ಕ ಚ್ಯುತಿ ಬರುವಂತೆ ನಡೆದುಕೊಳ್ಳುವುದು ಅಥವಾ ಹೇಳಿಕೆ ನೀಡದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
4. ಪಕ್ಷ ಹಾಗೂ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಅಭಿಪ್ರಾಯ ಕೇಳಬೇಕು.
5. ರಾಜ್ಯ ಪ್ರವಾಸದ ಸಂದರ್ಭದಲ್ಲಿ ಶಾಸಕರು ಹಾಗೂ ಸಂಸದರು ಒಗ್ಗೂಡಿಕೊಂಡು ಯಡಿಯೂರಪ್ಪ ಅವರ ಜೊತೆ ನಡೆಯಬೇಕು.
ಆದರೆ ಈ ನಿಯಮಗಳನ್ನು ಪಾಲಿಸದೆ ಸಿಎಂ ಸದಾನಂದ ಗೌಡರ ವಿರುದ್ಧ ತಿರುಗಿಬಿದ್ದಿರುವ ಯಡಿಯೂರಪ್ಪ ಅವರ ಮುಂದಿನ ನಡೆ ಕುತೂಹಲವಾಗಿದೆ. ನಿತಿನ್ ಗಡ್ಕರಿ ಆಗಮನದ ನಂತರ ಸದಾನಂದ ಗೌಡರು ಸಭೆಗೆ ಪಾಲ್ಗೊಳ್ಳುತ್ತಾರಾ? ಈಶ್ವರಪ್ಪ ಸಮಯೋಚಿತವಾಗಿ ಯಡಿಯೂರಪ್ಪ ಬಣದಲ್ಲಿ ಕಾಣಿಸಿಕೊಂಡಿದ್ದು ಏಕೆ?
ಶೆಟ್ಟರ್ ಗೆ ಯಡ್ಡಿ ಬಣ ನೀಡಿರುವ ಆಶ್ವಾಸನೆ ಏನು? ಸರ್ಕಾರ ಉರುಳಿಸುವ ಆಟದಲ್ಲಿ ಚುನಾವಣೆ ತಂತ್ರಗಾರಿಕೆ ಗತಿಯೇನು? ಎಂಬ ಪ್ರಶ್ನೆ ಗಡ್ಕರಿ ಅವರ ಮುಂದಿದೆ.
ಯಡಿಯೂರಪ್ಪ ಅವರು ಹೈಕಮಾಂಡ್ ಗೆ ಕೊಟ್ಟ ಬೇಡಿಕೆ, ಸಂದೇಶ ಏನು? ಮುಂದೆ ಓದಿ...












Click it and Unblock the Notifications