ಯಡ್ಡಿ ಏಟಿಗೆ ತುಮಕೂರಿನಲ್ಲಿ ಕೋಟಿಲಿಂಗೇಶ್ವರ ಮಠಾಷ್

Posted By:
Subscribe to Oneindia Kannada
no-kotilingeshwara-in-tumkur-siddaganga-matt
ಬೆಂಗಳೂರು, ಫೆ.23: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೋಟಿ ಲಿಂಗೇಶ್ವರ ಪ್ರತಿಷ್ಠಾಪನೆ ಮಾಡುವುದು ಬೇಡ ಎಂದು ಮಠದ ಹಿರಿಯ ಸ್ವಾಮೀಜಿ ಡಾ. ಶಿವಕುಮಾರ ಸ್ವಾಮೀಜಿ ಪ್ರಕಟಿಸಿದ್ದಾರೆ.

ಗಮನಾರ್ಹವೆಂದರೆ ವಸತಿ ಸಚಿವ, ಶಿವಕುಮಾರ ಸ್ವಾಮೀಜಿಯ ಪರಮ ಶಿಷ್ಯ ವಿ. ಸೋಮಣ್ಣ ಅವರು ಬುಧವಾರ ರಾತ್ರಿ ರಹಸ್ಯವಾಗಿ ತುಮಕೂರಿಗೆ ತೆರಳಿ, ಸ್ವಾಮೀಜಿಯನ್ನು ಭೇಟಿ ಮಾಡಿದ ನಂತರ ಇಂದು ಗುರುವಾರ ಸ್ವಾಮೀಜಿ ಈ ಯೋಜನೆಯಿಂದ ಹಿಂದೆಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಅಲ್ಲಿಗೆ, ತಮ್ಮನ್ನು ಕಡೆಗಣಿಸಿದ ಈಶ್ವರಪ್ಪ-ಸದಾನಂದ ಗೌಡ ಜೋಡಿಗೆ ಯಡಿಯೂರಪ್ಪ ಸರಿಯಾದ ಶಾಕ್ ನೀಡಿದ್ದಾರೆ. 4 ದಿನಗಳ ಹಿಂದೆ ಏನಾಯಿತೆಂದರೆ ಮುಖ್ಯಮಂತ್ರಿ ಸದಾನಂದ ಗೌಡರ ಒತ್ತಾಸೆಯ ಫಲವಾಗಿ ಈಶ್ವರಪ್ಪ ಜತೆಗೂಡಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೋಟಿ ಲಿಂಗೇಶ್ವರ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಯಡಿಯೂರಪ್ಪ ಬಣಕ್ಕೆ ಇದು ಸುತರಾಂ ಇಷ್ಟವಾಗಲಿಲ್ಲ.

ಇದಕ್ಕೆ ಪ್ರತಿತಂತ್ರ ರೂಪಿಸಿದ ಯಡಿಯೂರಪ್ಪ, ತಕ್ಷಣ ಶಿವಕುಮಾರ ಸ್ವಾಮೀಜಿಗಳ ಆಪ್ತ ಶಿಷ್ಯ ಸೋಮಣ್ಣನನ್ನು ರಂಗಕ್ಕಿಳಿಸಿದ್ದಾರೆ. 'ಮಠದ ಆವರಣದಲ್ಲಿ ಕೋಟಿಲಿಂಗೇಶ್ವರ ಸ್ಥಾಪನೆಯಿಂದ ಭಕ್ತರಲ್ಲಿ ಅನಗತ್ಯ ಗೊಂದಲ ಮೂಡುತ್ತದೆ. ಆದ್ದರಿಂದ ಕೋಟಿಲಿಂಗೇಶ್ವರ ಸ್ಥಾಪನೆ ಬೇಡ್ವೇ ಬೇಡ' ಎಂದು ಸ್ವಾಮೀಜಿಗಳಿಂದ ಹೇಳಿಸುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No Kotilingeshwara in Tumkur Siddaganga Mutt says Dr Shivakumara Swamiji. Just 4 days back DV Sadanada Gowda had laid the foundation stone for the installation of Kotilingeshwara at Tumkur Siddaganga Mutt.
Please Wait while comments are loading...