ಅರ್ಜೆಂಟ್ ಕೋರ್ಟಿಗೆ ಬರುವಂತೆ ಬಿಎಸ್ವೈಗೆ ಸಮನ್ಸ್

ರೇಸ್ ಕೋರ್ಸ್ ನಿವಾಸದಲ್ಲಿರುವ ಬಿಎಸ್ ಯಡಿಯೂರಪ್ಪ ಅವರು ಲೋಕಾಯುಕ್ತರ ಪೊಲೀಸರು ನೀಡಿದ ಸಮನ್ಸ್ ಗೆ ಗುರುವಾರ(ಫೆ.23) ಮಧ್ಯಾಹ್ನ ಸಹಿ ಹಾಕಿ ಸ್ವೀಕರಿಸಿದ್ದಾರೆ.
ಇದೀಗ ಬಂದ ಸುದ್ದಿ: ಸಿರಾಜಿನ್ ಬಾಷಾ ಸಲ್ಲಿಸಿರುವ ಡಿನೋಟಿಫಿಕಿಷನ್ ಸಂಭಿಸಿದ ಮೊದಲನೇ ದೂರಿನ ವಿಚಾರಣೆ ನಡೆಸಿದ ನ್ಯಾ. ಸುಧೀಂದ್ರರಾವ್ ಅವರು ಮುಂದಿನ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿ ಗುರುವಾರ(ಫೆ.23) ಸಂಜೆ ಆದೇಶ ಹೊರಡಿಸಿದ್ದಾರೆ. ಯಡಿಯೂರಪ್ಪ ಸೇರಿದಂತೆ 7 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಸಲ್ಲಿಸಿರುವ ಮೊದಲ ದೂರಿನ ಅಡಿಯಲ್ಲಿ ಈ ಸಮನ್ಸ್ ಜಾರಿಕೊಂಡಿದೆ. ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಜಗದೀಶ್ ಶೆಟ್ಟರ್, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವು ಶಾಸಕರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications