ಫೈನಲ್ ಷೋಗೆ ಯಡಿಯೂರಪ್ಪ ಸರ್ವಸಿದ್ದತೆ

ದಾಖಲಾರ್ಹ ಸಂಗತಿಯೆಂದರೆ ಈ ಸ್ಥಿತ್ಯಂತರದಲ್ಲಿ ಕಾಶಿಯಿಂದ ಬಂದ ಯಡಿಯೂರಪ್ಪ ಬಲಿಷ್ಠರಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದ ಗೌಡ ಏಕಾಂಗಿಯಾಗಿದ್ದಾರೇನೋ ಅನಿಸುತ್ತಿದೆ. ಯಡಿಯೂರಪ್ಪ ಬೇಡ ಅನ್ನುವುದಕ್ಕಿಂತ ಹೆಚ್ಚಿಗೆ ಸದಾನಂದ ಮುಂದುವರಿಯಲಿ ಎನ್ನುವವರ ಸಂಖ್ಯೆ ಕ್ಷೀಣವಾಗಿದೆ.
ಅನಂತ ಕುಮಾರ್ ನಿರ್ದೇಶಿತ ಯಡಿಯೂರಪ್ಪ ವಿರೋಧಿ ಎಲ್ ಕೆ ಅಡ್ವಾಣಿ ಅವರು ಸದಾನಂದ ಗೌಡ ಮುಂದುವರಿಕೆಗೆ ಒತ್ತಾಸೆಯಾಗಿರಬಹುದಾದರೂ ಮುಖ್ಯವಾಗಿ ಅಡ್ವಾಣಿ ಬಣವನ್ನು ಹೊರತುಪಡಿಸಿ, ಗಡ್ಕರಿ ಹೈಕಮಾಂಡ್ ಯಡಿಯೂರಪ್ಪಗೇ ತಮ್ಮ ನಿಷ್ಠೆ ತೋರುವುದರಲ್ಲಿ ಅನುಮಾನವಿಲ್ಲ. ಇನ್ನು 25 ಶಾಸಕ ಕಟ್ಟಾಳುಗಳೊಂದಿಗೆ ರಂಗಕ್ಕಿಳಿದ ಯಡಿಯೂರಪ್ಪ ತಮ್ಮ ಬಲವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಾನಾಗ್ಲಿಲ್ಲಾಂದ್ರೆ ಶೆಟ್ಟರ್ ಸಿಎಂ ಆಗಲಿ ಎಂದು ಪಲಕುತ್ತಲೇ ಯಡಿಯೂರಪ್ಪ ತಮ್ಮ ಅಸ್ತಿತ್ವವನ್ನು ದೃಢಪಡಿಸಿಕೊಳ್ಳುತ್ತಿದ್ದಾರೆ.
ಸದಾನಂದ ಗೌಡರ ಮುಖ್ಯಮಂತ್ರಿ ಖುರ್ಚಿ ಮೇಲಿನ ಹೈಕಮಾಂಡ್ ಹಿಡಿತ ಸ್ವಲ್ಪವೇ ಸಡಿಲವಾದರೂ ಧುತ್ತನೆ ತಮ್ಮನ್ನೇ ಪ್ರತಿಷ್ಠಾಪಿಸಿಕೊಳ್ಳುವುದು ಯಡಿಯೂರಪ್ಪ ಮನಸ್ಸಿನಲ್ಲಿ ಭದ್ರವಾಗಿ ಕುಳಿತಿದೆ. ಹಾಗಾಗುತ್ತದಾ ಎಂಬುದೇ ಸದ್ಯದ ಕುತೂಹಲ.












Click it and Unblock the Notifications