ಯಡಿಯೂರಪ್ಪ ಫ್ಯಾಮಿಲಿ ಮೇಲೆ ಬಿತ್ತು ಕ್ರಿಮಿನಲ್ ಕೇಸ್

BS Yeddyurappa Family Land Scam
ಶಿವಮೊಗ್ಗ, ಫೆ.21: ಕಾಶಿಯತ್ರೆ ಮುಗಿಸಿ ಬಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂಗಳವಾರ ಕಹಿ ಸುದ್ದಿ ಸಿಕ್ಕಿದೆ. ಅಕ್ರಮವಾಗಿ ನಿವೇಶನ ಪಡೆದ ಆರೋಪದ ಮೇಲೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಮೇಲೆ ಲೋಕಾಯುಕ್ತ ಕೊರ್ಟ್ ನಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.

ವಕೀಲ ವಿನೋದ್ ಎಂಬುವವರು ಯಡಿಯೂರಪ್ಪ ಅವರ ಪುತ್ರಿ ಅರುಣಾ ದೇವಿ ಅವರು ಪತ್ರಕರ್ತರ ಕೋಟಾದಡಿಯಲ್ಲಿ ಮಂಜೂರಾಗುವ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಯಡಿಯೂರಪ್ಪ, ಅರುಣಾದೇವಿ, ಗೃಹಮಂಡಳಿ ಆಯುಕ್ತ ದ್ಯಾಬೇರಿ ಸೇರಿದಂತೆ 8 ಜನರ ಮೇಲೆ ಆರೋಪ ಹೊರೆಸಿ ಶಿವಮೊಗ್ಗ ಜಿಲ್ಲಾ ಮತ್ತು ಲೋಕಾಯುಕ್ತ ನ್ಯಾಯಲಯಕ್ಕೆ ದೂರು ನೀಡಲಾಗಿದೆ.

ಯಡಿಯೂರಪ್ಪ ಅವರ ಕುಟುಂಬ ಶಿವಮೊಗ್ಗದಲ್ಲಿ ಅಕ್ರಮವಾಗಿ ನಾಲ್ಕು ನಿವೇಶನಗಳನ್ನು ಪಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಗೂ ಈ ಮುಂಚೆ ದೂರ ನೀಡಲಾಗಿತ್ತು. ಈಗ ವಿನೋದ್ ಅವರು ಮತ್ತೊಮ್ಮೆ ಶಿವಮೊಗ್ಗ ಲೋಕಾಯುಕ್ತ ಕೋರ್ಟ್ ನಲ್ಲಿ ಸಲ್ಲಿಸಿರುವ ದೂರು ಸ್ವೀಕಾರಗೊಂಡಿದೆ. ಮಾ.14ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+