ಇಂಧನ ಪೂರೈಕೆ ಗೊಂದಲ ಸೃಷ್ಟಿಸಿದ ಇರಾನ್

ಇರಾನ್ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದಂತೆ ಇತರೆ ರಾಷ್ಟ್ರಗಳು ನಡೆದುಕೊಂಡರೆ ಇಂಧನ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಅಹ್ಮದ್ ಕ್ವಲೆಹನಿ ಹೇಳಿದ್ದಾರೆ.
ಹೀಗಾಗಿ ಪೋರ್ಚುಗಲ್, ಇಟಲಿ, ಜರ್ಮನಿ, ಸ್ಪೇನ್, ನೆದರ್ಲೆಂಡ್ ಹಾಗೂ ಗ್ರೀಸ್ ದೇಶಗಳಿಗೆ ಇಂಧನ ಕೊರತೆ ಭೀತಿ ಎದುರಾಗಿದೆ.
ಎರಡು ಅಥವಾ ಐದು ವರ್ಷ ಅವಧಿಗೆ ಇಂಧನ ಪೂರೈಕೆ ಒಪ್ಪಂದ ಮಾಡಿಕೊಳ್ಳುವಂತೆ National Iranian Oil Company (NIOC)ಗೆ ಯುರೋಪಿಯನ್ ಯೂನಿಯನ್ ಪತ್ರ ಬರೆದಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಈ ರೀತಿ ಹೇಳಿಕೆ ನೀಡಿದೆ.
ಬ್ರಿಟನ್ ಹಾಗೂ ಫ್ರಾನ್ಸ್ ನಲ್ಲಿ ಈಗಾಗಲೇ ಇಂಧನಕ್ಕಾಗಿ ಪರದಾಟ ಆರಂಭವಾಗಿದೆ. ಕಳೆದ ಒಂಭತ್ತು ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ತಾರಕ್ಕೇರಿದೆ. ಇದರ ಪರೋಕ್ಷ ಪರಿಣಾಮ ಭಾರತದ ಮಾರುಕಟ್ಟೆ ಮೇಲೆ ಆಗಲಿದೆ.












Click it and Unblock the Notifications