• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೊಡ್ಡ ಗೌಡರಿಗೆ ಸಿದ್ದರಾಮಯ್ಯ ಖಡಕ್ ಸವಾಲು

By Srinath
|
ಜಗಳೂರು (ದಾವಣಗೆರೆ), ಫೆ.20: ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಎಚ್.ಡಿ. ದೇವೇಗೌಡ ಅವರು ತಮ್ಮ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಿಟ್ಟು ಬೇರೆ ಯಾವುದೇ ಹಿರಿಯ ನಾಯಕನ ಹೆಸರನ್ನು ಘೋಷಿಸುವ ತಾಕತ್ತು ಪ್ರದರ್ಶಿಸಲಿ ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಜನತಾದಳವನ್ನು ಮತ್ತೆ ಅಧಿಕಾರಕ್ಕೆ ತರುವುದೇ ತಮ್ಮ ಗುರಿ ಎಂದು ದೇವೇಗೌಡ ಅವರು ಹೋದ ಕಡೆಯಲ್ಲೆಲ್ಲ ಕಣ್ಣೀರು ಸುರಿಸುತ್ತಾರೆ. ಆದರೆ, ವಾಸ್ತವವಾಗಿ ಅವರಿಗೆ ಬೇಕಿರುವುದು ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡುವುದು. ರಾಜ್ಯದ ಅಧಿಕಾರ ತಮ್ಮ ಕುಟುಂಬದ ಅಧೀನದಲ್ಲೇ ಇರುವಂತೆ ನೋಡಿಕೊಳ್ಳುವುದು ಎಂದು ಸಿದ್ದು ಛೇಡಿಸಿದರು.

ಜೆಡಿಎಸ್‌ನಲ್ಲಿ ಪಿ.ಜಿ.ಆರ್. ಸಿಂಧ್ಯಾ, ಬಸವರಾಜ ಹೊರಟ್ಟಿ, ಎಂ.ಸಿ. ನಾಣಯ್ಯ ಮತ್ತಿತರ ಹಿರಿಯ ಮುಖಂಡರು ಇದ್ದಾರೆ. ಅವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಆದರೆ, ಹಾಗೆ ಎಂದಿಗೂ ಅವರು ಹೇಳುವುದಿಲ್ಲ. 30 ವರ್ಷ ಅವರೊಂದಿಗೆ ದುಡಿದಿದ್ದೇನೆ. ಪಕ್ಷ ಕಟ್ಟಿದ್ದೇನೆ. ನನ್ನಂಥವನಿಗೆ ಟೋಪಿ ಹಾಕಿದರು. ಶಾಮನೂರು ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್‌ಗೆ ಈಗ ಟೋಪಿ ಹಾಕಲು ಹೊರಟಿದ್ದಾರೆ.

2 ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿತ್ತು: 'ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆದರೆ, ದೇವೇಗೌಡರು ಆ ಅವಕಾಶವನ್ನು ತಪ್ಪಿಸಿ ನನ್ನನ್ನು ಉಪ ಮುಖ್ಯಮಂತ್ರಿ ಮಾಡಿದರು. ಬಳಿಕ ನನ್ನನ್ನು ಪಕ್ಷದಿಂದಲೇ ಹೊರ ಹಾಕಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದರು. ನಮ್ಮ ಬೆಂಬಲ ಇಲ್ಲದೆ ಹೋಗಿದ್ದರೆ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ, ಪಕ್ಷದಲ್ಲಿ 16 ಮಂದಿ ಸಂಸದರನ್ನು ಗೆಲ್ಲಿಸಿ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದು ನಾವೇ. ಆದರೆ, ಈಗ ಅವರು ಅದನ್ನೆಲ್ಲ ಮರೆತು ಮಾತನಾಡುತ್ತಿದ್ದಾರೆ' ಎಂದು ಕಿಡಿಕಾರಿದರು.

ಅವರ ಆಮಿಷಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಸಿದರು. ಕುಮಾರಸ್ವಾಮಿ ಅವರು ಒಳ್ಳೆಯ ಮುಖ್ಯಮಂತ್ರಿ ಆಗಿದ್ದರೆ ಅವರ ಹೆಸರು ಲೋಕಾಯುಕ್ತದಲ್ಲಿ ಹೇಗೆ ಸೇರುತ್ತಿತ್ತು? ಅವರ ಪತ್ನಿ ಏಕೆ ಜಾಮೀನು ಪಡೆದರು? ಜಂತಕಲ್ ಮೈನಿಂಗ್ಸ್‌ನಲ್ಲಿ ಏನು ಮಾಡಿದ್ದಾರೆ ಎಲ್ಲ ಶೀಘ್ರ ಬಯಲಿಗೆ ಬರಲಿದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Siddaramaiah challenged JD-S supremo HD Deve Gowda to name any senior leader in JDS other than H D Kumaraswamy as Chief Minister candidate in the forthcoming elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more