ಉಪಚುನಾವಣೆಗೂ ನನಗೂ ಸಂಬಂಧವಿಲ್ಲ : ಯಡಿಯೂರಪ್ಪ

Yeddyurappa to stay away from Udupi-Chikkamagalur by poll
ಬೆಂಗಳೂರು, ಫೆ. 18 : ತಮ್ಮ ಅಂಕೆಯಿಲ್ಲದೆ ಯಾವುದೇ ಅಭ್ಯರ್ಥಿ ನೇಮಕ ಶಕ್ಯವಿಲ್ಲ, ಸಾರಥ್ಯವಿಲ್ಲದೆ ಯಾವ ಚುನಾವಣೆಯನ್ನೂ ಗೆಲ್ಲುವುದು ಸಾಧ್ಯವಿಲ್ಲ ಎಂದು ಉಪಚುನಾವಣೆ ಬಂದಾಗಲೆಲ್ಲ ಹಂಸಬಿಳುಪಿನ ಸಫಾರಿ ಕೊಡವಿ ಏಳುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಂಬರುವ ಉಪಚುನಾವಣೆಗೂ ತಮಗೂ ಸಂಬಂಧವಿಲ್ಲ ಎಂದು ಕೈ ಜಾಡಿಸಿದ್ದಾರೆ.

ಮಾ.18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ತಲೆಕೂಡ ಹಾಕುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಸೇರಿದ್ದು. ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಟ್ಟಕ್ಕಾಗಿ ಸದಾನಂದ ಗೌಡರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಯಡಿಯೂರಪ್ಪನವರು ಉಡುಪಿ-ಚಿಕ್ಕಮಗಳೂರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಅನುಮಾನಗಳಿವೆ.

ಚುನಾವಣೆ ನಂತರ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಕೂಡ ಹಸ್ತಕ್ಷೇಪ ಮಾಡುವುದಿಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ವಿರಾಗಿಯಂತೆ ಮಾತನಾಡುತ್ತಿದ್ದಾರೆ. ಈ ನಡುವೆ, ಬರುವ ಸೋಮವಾರದ ಶಿವರಾತ್ರಿಯಂದು ವಿಶ್ವನಾಥ ದರುಶನ ಪಡೆದು, ಶಂಭೋಶಂಕರನ ಆಶೀರ್ವಾದ ಪಡೆಯಲೆಂದು ಯಡಿಯೂರಪ್ಪನವರು ಕಾಶಿಗೆ ತೆರಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+