ಬೆಂಗಳೂರು : ವಿದ್ಯಾರ್ಥಿ ಜೀವಕ್ಕೆ ಮುಳುವಾದ ಮೊಬೈಲ್
ಬೆಂಗಳೂರು,
ಫೆ. 18 : ಮೊಬೈಲ್‌ನಲ್ಲಿ ಹಾಡು ಕೇಳುತ್ತ ರೈಲ್ವ ಹಳಿಯನ್ನು ದಾಟುತ್ತಿದ್ದ ವಿದ್ಯಾರ್ಥಿಯೊಬ್ಬ ರೈಲಿಗೆ ಸಿಕ್ಕಿ ಮರಣಕ್ಕೀಡಾದ ದುರ್ಘಟನೆ ಶನಿವಾರ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆ ಅಕಸ್ಮಾತಾಗಿ ನಡೆದಿದ್ದಾ, ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. id="toptextpromo">ಕೆಂಗೇರಿ
ಉಪನಗರ ನಿವಾಸಿಯಾಗಿರುವ ಪುಷ್ಪಕ್ ದುರಂತ ಮರಣಕ್ಕೀಡಾಗಿರುವ ಹುಡುಗ. ಆತ ಜಯನಗರದಲ್ಲಿರುವ ಸುರಾನಾ ಕಾಲೇಜಿನಲ್ಲಿ ಪ್ರಥಮ ಬಿಬಿಎ ಓದುತ್ತಿದ್ದ. ಇಂದು ಕಾಲೇಜಿಗೆ ತೆರಳದೆ ಅಜ್ಜಿಮನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ. id='are-slot-1' class='oiad oi-axt oiadv'> id='top-searched-articles'>ರೈಲು
ಬರುತ್ತಿದ್ದರೂ ಹಳಿ ದಾಟುತ್ತಿದ್ದ ಪುಷ್ಪಕ್‌ನನ್ನು ಪ್ಲಾಟ್‌ಫಾರ್ಮ್ ಮೇಲಿದ್ದ ಜನರೆಲ್ಲ ಕೂಗಿ ಎಚ್ಚರಿಸಿದ್ದಾರೆ. ಆದರೆ, ಕಿವಿಗೆ ಹ್ಯಾಂಡ್ಸ್‌ಫ್ರೀ ಧರಿಸಿದ್ದ ಪುಷ್ಪಕ್ ಜಗತ್ತನ್ನೇ ಮರತವನಂತೆ ಹಳಿ ದಾಟುತ್ತಿದ್ದ. ಆಗ, ಮೊದಲು ರೈಲು ಆತನಿಗೆ ಡಿಕ್ಕಿ ಹೊಡೆದಿದೆ, ನಂತರ ನೆಲಕ್ಕೆ ಬಿದ್ದ ಅವನ ಮೇಲೆ ರೈಲು ಹರಿದುಹೋಗಿದೆ.











Click it and Unblock the Notifications