ದುರುಳ ಲಾಡೆನ್ ಪಾಪ್ ತಾರೆ ವಿಟ್ನಿಗೆ ಗಂಟುಬಿದ್ದಿದ್ದ

laden-lusted-to-marry-pop-star-whitney-houston
ವಾಷಿಂಗ್ಟನ್, ಫೆ.17: ಇವನೋ ಅರಿಭಯಂಕರ ಭಯೋತ್ಪಾದಕ. ಅವಳೋ ಜನಪ್ರಿಯ ಪಾಪ್ ತಾರೆ. ಪಾಪ್ ಲೋಕದಲ್ಲಿ ಉತ್ತುಂಗ ಸ್ಥಿತಿ ತಲುಪಿದ್ದ ವಿಟ್ನಿ ಹೌಸ್ಟನ್ ಳನ್ನು ಮದುವೆಯಾಗ ಬೇಕು ಎಂದು ಒಸಾಮಾ ಬಿನ್ ಲಾಡೆನ್ ಬಯಸಿದ್ದ!

ಪಕ್ಕಾ ಪಡ್ಡೆಗಳಂತೆ ಗಾಯಕಿ ವಿಟ್ನಿ ಹಿಂದೆ ಬಿದ್ದಿದ್ದ ಲಾಡೆನ್ ಸಾಹೇಬ, ಒಮ್ಮೆ ಅವಳ ಗಂಡನನ್ನು ಸಾಯಿಸಿ, ಅವಳನ್ನು ಮದುವೆಯಾಗಲು ವಿಫಲ ಸಂಚೂ ರೂಪಿಸಿದ್ದ. ಲಾಡೆನ್ ನ ಒಂದು ಕಾಲದ ಗೆಳೆಯ, ಲಾಡೆನ್ ನ ಗೆಳತಿಯರೊಂದಿಗೆ ನಿಕಟ ಸ್ನೇಹದಿಂದಿದ್ದ ಸುಡಾನಿನ ಲೇಖಕಿ ಕೋಲಾ ಬೂಫ್, ವಿಟ್ನಿ ಮತ್ತು ಲಾಡೆನ್ ಪ್ರೇಮ ಪ್ರಸಂಗದ ಬಗ್ಗೆ ಬರೆದಿದ್ದಾನೆ.

1996ರ ಆ ದಿನಗಳು... 96-98ರಲ್ಲಿಯೇ ಅಮೆರಿಕದಲ್ಲಿ ಲಾಡೆನ್ ಭಯೋತ್ಪಾದಕ ದಾಳಿ ನಡೆಸಲು ಮುಂದಾಗಿದ್ದ. ಆದರೆ ಅಮೆರಿಕ ಪಡ್ಡೆ ಹುಡುಗರಂತೆ ಪ್ರಿಯತಮೆ, ಗಾಯಕಿ ವಿಟ್ನಿ ಸಂಗದಲ್ಲಿ ಬಿದ್ದು ತನ್ನ ಭಯೋತ್ಪಾದಕ ಗುರಿ ಸಾಧಿಸುವುದರಿಂದ ವಿಮುಖನಾದ!

ಚಿನ್ನದ ಹುಕ್ಕಾ ಹೀರುತ್ತಾ, 'ಪ್ಲೆ ಬಾಯ್' ನೋಡುತ್ತಾ ... ಆ ದಿನಗಳಲ್ಲಿ ಕಾಮ, ಮಾದಕ ದ್ರವ್ಯ ಸೇವನೆ ಚಟ ಹತ್ತಿಸಿಕೊಂಡಿದ್ದ ಲಾಡೆನ್ ಅಕ್ಷರಶಃ ಆ ಲೋಕದಲ್ಲೇ ವಿಹರಿಸುತ್ತಿದ್ದ. ಭಯೋತ್ಪಾದಕ ಚಟುವಟಿಕೆಗಳತ್ತ ಹೆಚ್ಚು ಗಮನಹರಿಸುತ್ತಿರಲಿಲ್ಲ. ವಿಶ್ವದ ಅತ್ಯುಗ್ರ ಲಾಡೆನ್, ಲೇಖಕಿ ಬೂಫ್ ಹೇಳುವಂತೆ ಗಾಯಕಿ ವಿಟ್ನಿಯನ್ನು ತನ್ನ ಕಾಮದಾಳವನ್ನಾಗಿಸಿಕೊಂಡಿದ್ದ. 'ಅವಳು ನಿಜಕ್ಕೂ ವಿಶ್ವ ಸುಂದರಿ. ಅವಳನ್ನು ಮದ್ವೆಯಾಗಲೇಬೇಕು' ಎಂದು ಲಾಡೆನ್ ಗೋಗರೆಯುತ್ತಿದ್ದನಂತೆ.

ಚಿನ್ನದ ಹುಕ್ಕಾ ಹೀರುತ್ತಾ ವಿಟ್ನಿಯನ್ನು ನೆನಪಿಸಿಕೊಳ್ಳುತ್ತಾ ಲಾಡೆನ್ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ. ಲಾಡೆನ್ ಸೂಟ್ ಕೇಸುಗಳಲ್ಲಿ ವಿಟ್ನಿ ಫೋಟೋಗಳೇ ತುಂಬಿದ್ದವು. ಜತೆಗೆ, ರತಿ ಲೋಕದ 'ಪ್ಲೇ ಬಾಯ್' ಪುಸ್ತಕಗಳನ್ನು ನೋಡುತ್ತಿದ್ದ. ಅಂದಹಾಗೆ, ಲೇಖಕಿ ಬೂಫ್ ಜತೆಗೂ ಲಾಡೆನ್ ಆಗಾಗ ಚಕ್ಕಂದವಾಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+