ವಿವಾದದ ಗೂಡಾದ 'ಪ್ರಿಯಾಂಕಾ ಗಾಂಧಿ ಭಿಕ್ಷಾಟನೆ'

uma-bharti-remark-priyanka-beggs-with-kids-criticism
ಲಖ್ನೊ,ಫೆ.16: ಮೊನ್ನೆ ಸ್ವತಃ ತನ್ನನ್ನು 'ಮಳೆಗಾಲದ ಕಪ್ಪೆ' ಎಂದು ಕರೆದುಕೊಂಡು ತಮ್ಮ ರಾಹುಲ್‌ ಗಾಂಧಿಯನ್ನು ಇಂಗುತಿಂದ ಮಂಗನಂತೆ ಸಾರ್ವಕಾಲಿಕ ಕಪ್ಪೆ ಮಾಡಿದ್ದ ಕಾಂಗ್ರೆಸ್ ಪ್ರಚಾರಕಿ ಪ್ರಿಯಾಂಕಾ ಗಾಂಧಿಯನ್ನು ಈ ಬಾರಿ ಬಿಜೆಪಿ ಪ್ರಚಾರಕಿ ಉಮಾ ಭಾರತಿ ಕೆಣಕಿದ್ದಾರೆ.

ಮೊನ್ನೆ ರಾಯ್ ಬರೇಲಿಯಲ್ಲಿ ಮಕ್ಕಳಾದಿಯಾಗಿ ಅಂದರೆ ನೆಹರೂ ವಂಶದ ನಾಲ್ಕನೇ ಪೀಳಿಗೆಯನ್ನು ಕಂಕುಳಲ್ಲಿಟ್ಟುಕೊಂಡು ಪ್ರಚಾರಕ್ಕಿಳಿದ ಪ್ರಿಯಾಂಕಾ ಗಾಂಧಿಯನ್ನು 'ಇಬ್ಬರು ಮಕ್ಕಳೊಂದಿಗೆ ಮತಕ್ಕಾಗಿ ಭಿಕ್ಷೆ ಬೇಡುತ್ತಿರುವ' ಪ್ರಿಯಾಂಕಾ ಎಂದು ಉಮಾ ಭಾರತಿ ಕೆರಳಿಸಿದ್ದರು.

ಇದೀಗ ಉಮಾ ಭಾರತಿಯ ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್, ಉಮಾ ಮೇಲೆ ಹರಿಹಾಯ್ದಿದೆ. 'ಬಹುಶಃ ಆಕೆಗೆ (ಉಮಾಗೆ) ಹೆಚ್ಚು ಅನುಭವ ಇದೆ ಅನಿಸುತ್ತಿದೆ. ಕೇಸರಿ ಬಟ್ಟೆ ತೊಟ್ಟು ಸಾಧ್ವಿಯಾಗಿ ಭಿಕ್ಷಾಟನೆ ಮಾಡುವವರು ಅವರು. ಆಕೆ ಆತ್ಮಾವಲೋಕನ ಮಾಡಿಕೊಳ್ಳಲಿ. ಛೇ ಆಕೆಯ ಮಾತುಗಳು ಗಂಭೀರವಾಗಿ ತೆಗೆದುಕೊಳ್ಳುವಂತಹುದಲ್ಲ. ಘನತೆಯೇ ಇಲ್ಲ ಬಿಡಿ' ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಕಿಡಿಕಾರಿದ್ದಾರೆ.

ಅಷ್ಟಕ್ಕೂ ಉಮಾ ಏಕೆ ಕಟಕಿಯಾಡಿದ್ದರಪ್ಪಾ ಅಂದರೆ ಉಮಾ, ರಾಹುಲ್ ಗಾಂಧಿಯತ್ತ ಬೊಟ್ಟು ಮಾಡುತ್ತಾರೆ: ಅವಯ್ಯ ನಮ್ಮನ್ನು ಮೊದಲು ಭಿಕ್ಷುಕರು ಎಂದು ಕರೆದಿದ್ದು. ಆತನಿಗೆ ಭಿಕ್ಷುಕರು ಮತ್ತು ಕೂಲಿಕಾರರ ನಡುವಣ ವ್ಯತ್ಯಾಸ ಗೊತ್ತಿಲ್ಲ ಅನಿಸುತ್ತೆ. ಕೂಲಿಕಾರರು ಬೆವರು ಸುರಿಸಿ ಹಣ ಗಳಿಸುತ್ತಾರೆ. ಆದರೆ ಆಯಮ್ಮ ಪ್ರಿಯಾಂಕಾ ತನ್ನಿಬ್ಬರು ಮಕ್ಕಳನ್ನು ಬಗಲಲ್ಲಿಟ್ಟುಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಉಮಾ ಗರಂ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+