ಭಾರತ ತೊರೆಯುವುದಿಲ್ಲ:ಯುನಿನಾರ್ ಸ್ಪಷ್ಟನೆ

122 ಟೆಲಿಕಾಂ ಸಂಸ್ಥೆಗಳ ಲೈಸನ್ಸ್ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಕಾನೂನು ಪ್ರಕಾರ ಯಾವ ರೀತಿ ಹೋರಾಟ ಸಾಧ್ಯ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಭಾರತ ಬಿಟ್ಟು ಹೋಗುವ ಯಾವುದೇ ಯೋಚನೆಗಳಿಲ್ಲ ಎಂದು ಯುನಿನಾರ್ ಸಂಸ್ಥೆ ಪ್ರಕಟಿಸಿದೆ.
ನಾರ್ವೆ ಮೂಲದ ಟೆಲಿನಾರ್ ಸಮೂಹ ಹಾಗೂ ಭಾರತದ ಯುನಿಟೆಕ್ ಲಿ ಜಂಟಿಯಾಗಿ ಯುನಿಟೆಕ್ ವೆರ್ ಲೆಸ್ ಲಿ ಸ್ಥಾಪಿಸಿ, ಉತ್ತಮ ಪ್ರಗತಿಯನ್ನು ಕಂಡಿದೆ. ಭಾರತದಲ್ಲಿ ಟೆಲಿಕಾಂ ಕ್ಷೇತ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿದೆ. ನಾವು ಭಾರತಲ್ಲಿ ವಹಿವಾಟು ಮುಚ್ಚುವ ಸಂಭವವಿಲ್ಲ ಎಂದು ಯುನಿಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಸಿಗ್ವೆ ಬ್ರೆಕ್ಕೆ ಹೇಳಿದ್ದಾರೆ.
ಯುನಿಟೆಕ್ ಸೇರಿದಂತೆ 2008ರ ನಂತರ ಲೈಸನ್ಸ್ ಪಡೆದ ಎಲ್ಲಾ ಜಿಎಸ್ ಎಂ ಸೇವಾ ಸಂಸ್ಥೆಗಳ ಲೈಸನ್ಸ್ ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, 2ಜಿ ತರಂಗ ಹಂಚಿಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಟ್ರಾಯ್ ಮನವರಿಕೆ ಮಾಡಿಕೊಡುವ ಭರವಸೆ ಇದೆ ಎಂದು ಯುನಿಟೆಕ್ ಸಂಸ್ಥೆ ಹೇಳಿದೆ.












Click it and Unblock the Notifications