ಡರ್ಟಿ ಮಿನಿಸ್ಟರ್ ಗಳಿಗೆ ಪೊಲೀಸರಿಂದ ನಿರಾಳ ಸುದ್ದಿ

BJP Ministers Dirty Picture Watching
ಬೆಂಗಳೂರು, ಫೆ.15 : ವಿಧಾನಸಭೆಯಲ್ಲಿ ಮೊಬೈಲ್ ಮೂಲಕ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಮೂವರು ಬಿಜೆಪಿ ಸಚಿವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ತಮ್ಮ ವರದಿಯನ್ನು ಕೋರ್ಟ್ ಗೆ ಬುಧವಾರ(ಫೆ.15) ಸಲ್ಲಿಸಿದ್ದಾರೆ.

ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಜೆ ಪಾಲೇಮಾರ್ ಅವರ ವಿರುದ್ಧ ವಕೀಲ ಧರ್ಮಪಾಲ ಗೌಡ ಅವರು ಪ್ರಕರಣದ ಸಂಬಂಧಿಸಿದಂತೆ ಫೆ.14ರಂದು ಖಾಸಗಿ ದೂರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ 8ನೇ ಎಸಿಎಂಎಂ ನ್ಯಾಯಾಲಯ ಕೇಳಿದ ಪ್ರಶ್ನೆಗೆ ಪೊಲೀಸರು ನೀಡಿದ ಉತ್ತರ ಅಸಮರ್ಪಕವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಾಜಿ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಪೊಲೀಸರು ತಡವರಿಸಿದರು.

ಇದಕ್ಕೆ ಪೂರಕವಾಗಿ ಸಮಜಾಯಿಸಿ ನೀಡಿದ ಪೊಲೀಸರು, ಸದನದ ಒಳಗೆ ಪೊಲೀಸರಿಗೆ ಪ್ರವೇಶ ನಿಷಿದ್ಧವಾಗಿದೆ. ಸದನದ ಹೊರಗಿನಿಂದ ಎಂಎಂಎಸ್ ಬಂದಿರುವುದರಿಂದ ಮಾಜಿ ಸಚಿವರನ್ನು ಪ್ರಶ್ನಿಸುವಂತೆ ಕೋರ್ಟ್ ಆದೇಶಿಸಿತ್ತು.

ಆದರೆ, ಸ್ಪೀಕರ್ ಅವರ ಅನುಮತಿ ಇಲ್ಲದೆ ಮಾಜಿ ಸಚಿವರನ್ನು ಪ್ರಶ್ನಿಸುವಂತಿಲ್ಲ. ಹಾಗಾಗಿ ಪ್ರಕರಣದ ತನಿಖೆ ಕುಂಠಿತವಾಗಿದೆ ಎಂದು ಪೊಲೀಸರು ನುಣಚಿಕೊಂಡಿದ್ದಾರೆ.

ತಾಂತ್ರಿಕವಾಗಿ ಪೊಲೀಸರ ಹೇಳಿಕೆ ಸರಿ ಇದೆಯಾದರೂ ತನಿಖೆ ನಡೆಸುವ ಮೊದಲ ಎಫ್ ಐಆರ್ ದಾಖಲಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಸದನ ಸಮಿತಿ ವರದಿ ಬಂದ ನಂತರ ಒತ್ತಡ ಪರಿಸ್ಥಿತಿ ನೋಡಿಕೊಂಡು ಎಫ್ ಐಆರ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+