ಮೈಸೂರಲ್ಲಿ ಮಹಿಳಾ ಭಕ್ಷಕ, ಬೆಂಗಳೂರಲ್ಲಿ ಕಾಮುಕ ಶಿಕ್ಷಕ ಬಂಧನ

ಕಾಮುಕನನ್ನು ಬೋರೆ ಆನಂದೂರು ಗ್ರಾಮದ ಸುಧೀಂದ್ರ ಎಂದು ಗುರುತಿಸಲಾಗಿದ್ದು, ಕಳೆದ ಕೆಲ ದಿನಗಳಿಂದ ರಾಧಾ ಎಂಬ ಗಂಡನನ್ನು ದೂರವಾಗಿರುವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಬುಧವಾರ ಸಮಯಸಾಧಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ ಸಾರ್ವಜನಿಕರಿಗೆ ಸಿಕ್ಕುಬಿದ್ದಿದ್ದಾನೆ.
ಸುಧೀಂದ್ರನಿಗೆ ಕೂಡ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೂ, ಕಾಮದಾಸೆಗೆ ಬಿದ್ದು ರಾಧಾ ಒಂಟಿಯಾಗಿರುವುದನ್ನು ನೋಡಿ ಆಕೆಯ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದ. ಇದು ಸಾರ್ವಜನಿಕರ ಗಮನಕ್ಕೆ ಕೂಡ ಬಂದಿತ್ತು. ಇಂದು ಸಿಕ್ಕ ಸುಧೀಂದ್ರನನ್ನು ಸಾರ್ವಜನಿಕರು ಕಂಬಕ್ಕೆ ಕಟ್ಟಿಹಾಕಿ, ಅಂಗಿ ಹರಿದು ಮನಬಂದಂತೆ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ಕಾಮುಕ ಶಿಕ್ಷಕನ ಬಂಧನ : ಐದನೇ ತರಗತಿಯ ವಿದ್ಯಾರ್ಥಿನಿಯನ್ನು ಬೆದರಿಸಿ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಶಿಕ್ಷಕನೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ಕೃಷ್ಣಮೂರ್ತಿ ಕೆ.ಆರ್. ಪುರಂನಲ್ಲಿರುವ ಕೆಎನ್ಎಸ್ಎಸ್ ವಿದ್ಯಾಮಂದಿರದಲ್ಲಿ ಪಾಠ ಕಲಿಸುತ್ತಿದ್ದು ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಇದು ವಿದ್ಯಾರ್ಥಿನಿ ಮುಖಾಂತರ ಪಾಲಕರ ಗಮನಕ್ಕೆ ಬಂದು ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications