ಪ್ರೀತಿ ಹೃದಯಗಳ ವಿಷಯವಲ್ಲ, ಮೆದುಳಿನ ವಿಷ್ಯ

ನ್ಯೂಯಾರ್ಕ್‌ನ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಈ ಹೊಸ ವಿಷಯವನ್ನು ಪತ್ತೆಹಚ್ಚಿದ್ದು, ಪ್ರೀತಿ-ಪ್ರೇಮದ ಭಾವನೆಗಳಿಗೆ ಸಿಲುಕುವಲ್ಲಿ ಮೆದುಳು ಪ್ರಮುಖ ಪಾತ್ರವಹಿಸುವುದಾಗಿ ತಿಳಿಸಿದ್ದಾರೆ. ಪ್ರೀತಿಯ ಆಸೆ ಮೂಡುವಲ್ಲಿ ಹೃದಯಕ್ಕಿಂತ ಮೆದುಳು ಹೆಚ್ಚಿನ ಪಾತ್ರ ವಹಿಸುವುದಾಗಿ ಅವರು ಹೇಳಿದ್ದಾರೆ.
ಗಾಢ ಪ್ರೀತಿಗೆ ಒಳಗಾದ ಹತ್ತು ಮಂದಿ ಮಹಿಳೆಯರು ಹಾಗೂ ಏಳು ಮಂದಿ ಪುರುಷರ ಮೆದುಳಿನ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದೆ. ಯಾರಿಗಾದರೂ ಪ್ರಶಸ್ತಿ ಅಥವಾ ಖುಷಿಯಾದುದು ದೊರೆತಾಗ ಮೆದುಳಿನಲ್ಲಿ ಆಗುವ ಕ್ರಿಯೆಯ ಮಾದರಿಯಲ್ಲೇ ಈ ಎಲ್ಲರೂ ತಾವು ಪ್ರೀತಿಸುತ್ತಿರುವ ವ್ಯಕ್ತಿಗಳ ಭಾವಚಿತ್ರ ನೋಡಿದ ಕೂಡಲೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ಸಂಶೋಧಕರ ತಂಡ ಹೇಳಿದೆ. ವಿಶ್ವಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ನಡೆದಿರುವ ಸಂಶೋಧನೆ ಹೊಸ ಅಂಶವೊಂದನ್ನು ತೆರೆದಿಟ್ಟಿದೆ.
ಅತಿಯಾದ ಪ್ರೇಮಕ್ಕೆ ಒಳಗಾದ ವ್ಯಕ್ತಿಯ ಮೆದುಳು ಅಮಲು ಪದಾರ್ಥಕ್ಕೆ ದಾಸರಾಗಿರುವ ವ್ಯಕ್ತಿಗಳ ಮೆದುಳು ಕಾರ್ಯ ನಿರ್ವಹಿಸುವ ರೀತಿಯಲ್ಲೇ ಕೆಲಸಮಾಡುತ್ತದೆ ಎಂದು ಸಂಶೋಧನಾ ತಂಡದ ಸಹಾಯಕ ಆರ್ಥರ್ ಆ್ಯರನ್‌ರನ್ನು ಉಲ್ಲೇಖಿಸಿ ವರದಿ ತಿಳಿಸಿದೆ(ಪಿಟಿಐ).












Click it and Unblock the Notifications