ಬಿಜೆಪಿ ಕಿತ್ತೊಗೆಯುವ ಶಕ್ತಿ ಜೆಡಿಎಸ್ ಗಿದೆ : ದೇವೇಗೌಡ

ನಗರದ ಗವಿ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, 'ಜನಪರ ಜನತಾ ಯಾತ್ರೆಗೆ' ಅಧಿಕೃತ ಚಾಲನೆ ನೀಡಿದ ನಂತರ ದೇವೇಗೌಡರು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜನವಾಹಿನಿ ವಾಹನ ಏರುವ ಮೂಲಕ ಜೆಡಿಎಸ್ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದರು.
ಕಲಾಪ ನೋಡಲಾರೆ: ಕಳೆದ 60 ವರ್ಷದ ರಾಜ್ಯದ ಇತಿಹಾಸದಲ್ಲಿ ರಾಜ್ಯ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ. ಲೋಕಸಭೆ, ರಾಜ್ಯ ವಿಧಾನಸಭೆ ಕಲಾಪಗಳನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ. ಜೆಡಿಎಸ್ ಪಕ್ಷ ಆಡಳಿತದಲ್ಲಿದ್ದಾಗ, ಯಾವುದೇ ಅಶ್ಲೀಲ, ಕೀಳುಮಟ್ಟದ ರಾಜಕಾರಣ ನಡೆಸಲಿಲ್ಲ.
ನಾನು ಸಮ್ಮನೆ ಕೂರಲಾರೆ. ಬಿಜೆಪಿಯನ್ನು ಬುಡ ಸಮೇತ ಕಿತ್ತು ಹಾಕುವೆ ಎಂದು ದೇವೇಗೌಡರು ಗುಡುಗಿದರು. ರಾಮನಗರ, ಮಳವಳ್ಳಿ ಮೂಲಕ ಚಾಮರಾಜನಗರ ಜಿಲ್ಲೆ ಹನೂರು ಪಟ್ಟಣ ಸೇರಿದ ಜನವಾಹಿನಿ ಯಾತ್ರೆಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ನಟಿ ಪೂಜಾಗಾಂಧಿ ಕೂಡಾ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಜೆಡಿಎಸ್ ಜನವಾಹಿನಿ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮಾರ್ಚ್ 8ರೊಳಗೆ ಯಾತ್ರೆ ಮುಗಿಸಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ದೇವೇಗೌಡರು ಹೇಳಿದರು.












Click it and Unblock the Notifications