ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್
ಕಡಬ
(ಮಂಗಳೂರು), ಫೆ. 10: ರಾಜ್ಯದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ತಂದೆ ಮೋನಪ್ಪ ಗೌಡ (74) ಅವರ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಬಕಾರಿ ಸಚಿವ ರೇಣುಕಾಚಾರ್ಯ ಸೇರಿದಂತೆ ಅನೇಕ ಶಾಸಕರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ದಂಡು ಗುರುವಾರ ಚಾರ್ವಾಕಕ್ಕೆ ಆಗಮಿಸಿತ್ತು. id="toptextpromo">ಕೈಗಾರಿಕಾ
ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಿವನಗೌಡ ನಾಯಕ್, ಹರತಾಳು ಹಾಲಪ್ಪ, ಶಾಸಕರಾದ ಸುರೇಶ್ ಗೌಡ, ಮಲ್ಲಿಕಾ ಪ್ರಸಾದ್, ಲಕ್ಷ್ಮೀನಾರಾಯಣ, ವಿಶ್ವನಾಥ್, ಮಾಜಿ ಶಾಸಕಿ ಮಲ್ಲಾಜಮ್ಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮುಂತಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇಂಧನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳೂ ಉಪಸ್ಥಿತರಿದ್ದರು. id='are-slot-1' class='oiad oi-axt oiadv'> id='top-searched-articles'>ಚಾರ್ವಾಕ
ಗ್ರಾಮಕ್ಕೆ ಆಗಮಿಸಿದ ಯಡಿಯೂರಪ್ಪ ಅವರು ಆರೆಸ್ಸೆಸ್‌ನ ಹಿರಿಯ ಮುಖಂಡ ದಾ.ಮಾ. ರವೀಂದ್ರ ಅವರೊಂದಿಗೆ ದೀರ್ಘಕಾಲ ಮಾತುಕತೆ ನಡೆಸಿದರು. ಕರಂದ್ಲಾಜೆ ಅವರ ಮನೆಯ ಅಡಿಕೆ ತೋಟದೊಳಗೆ ಕುರ್ಚಿ ಹಾಕಿಸಿಕೊಂಡ ಯಡಿಯೂರಪ್ಪ ಅವರು ಯಾರಿಗೂ ಅತ್ತ ಬರಲು ಅವಕಾಶ ನೀಡದಂತೆ ತನ್ನ ಸಹಾಯಕರಿಗೆ ಸೂಚಿಸಿ ರವೀಂದ್ರ ಅವರೊಂದಿಗೆ ಖಾಸಗಿಯಾಗಿ ಚರ್ಚಿಸಿದರು. ಸ್ವಲ್ಪ ಕಾಲ ಶೋಭಾ ಕರಂದ್ಲಾಜೆಯವರೂ ಮಾತುಕತೆಯಲ್ಲಿ ಜತೆಯಾದರು.











Click it and Unblock the Notifications