ಬ್ಲೂ ಫಿಲಂ ನೋಡಿ ಮೂರ್ಛೆ ಹೋದ ಶಾಸಕ:ರೇಣುಕಾ

ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ತಂದೆಯ ವೈಕುಂಠ ಸಮಾರಾಧನೆಗೆ ಆಗಮಿಸಿದ ವೇಳೆ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ಆದರೆ ಮಾಧ್ಯಮದ ಕಣ್ಣಿಗೆ ಬೀಳದೆಯೇ ಮೂರ್ಛೆ ಹೋದ ಆ ಶಾಸಕ ಮಹಾಶಯ ಯಾರು ಎಂಬ ಗುಟ್ಟನ್ನು ರೇಣುಕಾ ಬಿಟ್ಟುಕೊಡಲಿಲ್ಲ.
'ಮಾಧ್ಯಮಗಳಿಗೆ ಬ್ಲೂ ಫಿಲಂ ವಿಚಾರದಲ್ಲಿ ಶಾರ್ಪ್‌ನೆಸ್ ಸಾಲದೇ ಹೋಯಿತು, ಉಡುಪಿ ಬೀಚ್‌ನ ರೇವು ಪಾರ್ಟಿ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ, ಅಲ್ಲಿ ನಡೆದ ವಿದ್ಯಮಾನದ ವಿಡಿಯೋ ತುಣುಕು ಹಾಗೂ ವಿದೇಶದಲ್ಲಿ ನಡೆಯುತ್ತಿರುವ ವಿದ್ಯಮಾನದ ತುಣುಕನ್ನು ಸಚಿವರು ವೀಕ್ಷಿಸುತ್ತಿದ್ದರು' ಎಂದು ರೇಣುಕಾ ಸಚಿಬ ಸವದಿಯನ್ನು ಸಮರ್ಥಿಸಿಕೊಂಡರು.
'ಆದರೆ, ಇದೇ ಚಿತ್ರವನ್ನು ವೀಕ್ಷಿಸಿದ ಇತರ ಕೆಲವು ಶಾಸಕರು ದಂಗಾಗಿದ್ದರು, ಒಬ್ಬರು ಶಾಸಕರಂತೂ ಮೂರ್ಛೆ ಬಿದ್ದಿದ್ದರು. ಇದೆಲ್ಲ ಮಾಧ್ಯಮಗಳ ಕ್ಯಾಮಾರಗಳಿಗೆ ಸಿಗದೆ, ಕೇವಲ ಸಚಿವ ಸವದಿ ಮಾತ್ರ ವೀಕ್ಷಿಸುತ್ತಿದ್ದರು ಅನ್ನುವುದು ಸರಿಯಲ್ಲ' ಎಂದ ರೇಣುಕಾಚಾರ್ಯ, ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದ ಪ್ರತಿಪಕ್ಷಗಳು ಈಗ ಪಕ್ಷದ ವರ್ಚಸ್ಸಿಗೆ ಕುಂದು ತರುವ ಕೆಲಸ ಮಾಡುತ್ತಿವೆ ಎಂದೂ ಕಿಡಿಕಾರಿದರು.












Click it and Unblock the Notifications