ಬೆಂಗಳೂರಿನಲ್ಲಿ ಫೆ.11ರಂದು ನ್ಯೂಜೆರ್ಸಿ ಕೋಗಿಲೆ ವಸಂತ ಗಾನ

ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕ್, ರಾಜೇಶ್ ಕೃಷ್ಣನ್ ಅವರು ವಸಂತಾ ಶಶಿ ಅವರೊಂದಿಗೆ ದನಿಗೂಡಿಸಿ ರಂಜಿಸಲಿದ್ದಾರೆ. ಸವಿಗಾನ ಲಹರಿ ತಂಡ ಕೂಡ ಸಭಿಕರನ್ನು ಸಂಗೀತ ಸಾಗರದಲ್ಲಿ ತೇಲಾಡಿಸಲಿದೆ. ಗಾಯಕಿ ಮಾಲತಿ ಶರ್ಮಾ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್, ಮಲ್ಲೇಶ್ವರ ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಸಾಹಿತಿ ದೊಡ್ಡರಂಗೇಗೌಡ, ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ಬಿ.ಜಯರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಈ ಸಂಗೀತ ಕಾರ್ಯಕ್ರಮ 'ಹಂಸ ವಸಂತ ಗಾನ' ಪರಿಸರ ಚಿತ್ರ ಭಾವಗೀತವನ್ನು ಹಂಸಜ್ಯೋತಿ ಆಯೋಜಿಸಿದೆ. ವಿಳಾಸ ಇಂತಿದೆ : ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು. ಸಮಯ : ಸಂಜೆ 5.30ಕ್ಕೆ. ಸಂಗೀತ ಸುಧೆಯನ್ನು ಸವಿಯಲು ಬರಲು ಮರೆಯದಿರಿ.












Click it and Unblock the Notifications