ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು

List of tained BJP ministers and scandals
ಬೆಂಗಳೂರು, ಫೆ. 8 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು, ಹರತಾಳು ಹಾಲಪ್ಪ, ವಿ. ಸೋಮಣ್ಣ, ವೈ ಸಂಪಂಗಿ, ಕೃಷ್ಣಯ್ಯ ಶೆಟ್ಟಿ ಸ್ಪೀಕರ್ ಬೋಪಯ್ಯ, ರೇಣುಕಾಚಾರ್ಯ, ಎಸ್ಆರ್ ವಿಶ್ವನಾಥ್. ಇವರೆಲ್ಲ ಹಳಬರಾದರೆ ಈಗ ಹೊಸದಾಗಿ ಸೇರ್ಪಡೆಯಾದವರು ಲಕ್ಷ್ಮಣ ಸವದಿ, ಸಿಸಿ ಪಾಟೀಲ, ಕೃಷ್ಣ ಪಾಲೆಮಾರ್. ಇವರೆಲ್ಲರ ನಡುವಿನ ಸಾಮಾನ್ಯ ಅಂಶವೇನು? ಎಲ್ಲರೂ ಬಿಜೆಪಿ ಪಕ್ಷದಲ್ಲಿ ರಾಜ್ಯಭಾರ ನಡೆಸಿದವರು. ಅದರ ಹೊರತಾಗಿ?

ಇವರೆಲ್ಲರ ಸಾಮಾನ್ಯ ಅಂಶ ಮತ್ತೆ ಒತ್ತಿ ಹೇಳಬೇಕಾಗಿಲ್ಲ. ಎಲ್ಲರೂ ಒಂದಿಲ್ಲೊಂದು ಭಾನಗಡಿ, ಹಗರಣಗಳಲ್ಲಿ ಭಾಗಿಯಾಗಿ ಮುಖವನ್ನು ಕರ್ಚೀಫಿನಿಂದ ಒರೆಸಿಕೊಂಡು ಆರಾಮವಾಗಿರುವವರು. ಹಗರಣಗಳಲ್ಲಿ ಭಾಗಿಯಾಗಿರುವ ಇಷ್ಟೊಂದು ಜನರನ್ನು ಮಡಿಲಲ್ಲಿ ಇಟ್ಟುಕೊಂಡ ಭಾರತೀಯ ಜನತಾ ಪಕ್ಷದ ಸರಕಾರ ಇನ್ನೂ ಉಳಿದಿದ್ದು ಆಶ್ಚರ್ಯದ ಸಂಗತಿ ಎಂದು ವಿರೋಧ ಪಕ್ಷದವರು ಕೂಗಾಡುತ್ತಿದ್ದಾರೆ. ಆದರೆ, ಇದೇ ರಾಜಕೀಯ ಅಲ್ಲವೆ?

ಇಂಥ ಸರಕಾರಕ್ಕೆ ಆಡಳಿತ ನಡೆಸಲು ಯಾವುದೇ ಹಕ್ಕು ಇಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಪಟ್ಟು ಹಿಡಿದಿದೆ. ನಾವಷ್ಟೇ ಏಕೆ ನೀವೇನು ಸಾಚಾಗಳಾ ಎಂದು ಬಿಜೆಪಿ ನಾಯಕರು ಪ್ರತಿವಾದ ಮಂಡಿಸುತ್ತಿದ್ದಾರೆ. ಸರಕಾರ ಬೀಳಿಸಲೇಬೇಕು ಎಂದು ಕಾಂಗ್ರೆಸ್ ಎಲ್ಲ ಪ್ರಯತ್ನ ನಡೆಸುತ್ತಿದ್ದರೆ, ತಾನಾಗೇ ಬೀಳಲಿ ಎಂದು ಬಿಜೆಪಿಯಲ್ಲಿನ ಕೆಲ ನಾಯಕರೇ ಮೀಸೆಯ ಅಡಿಯಲ್ಲಿ ನಗುತ್ತಿದ್ದಾರೆ. ಈಗ, ಯಾವ್ಯಾವ ನಾಯಕರು ಯಾವ್ಯಾವ ಹಗರಣಗಲ್ಲಿ ಭಾಗಿಯಾಗಿದ್ದಾರೆ ನೋಡೋಣ.

* ಬಿಎಸ್ ಯಡಿಯೂರಪ್ಪ (ಶಿವಮೊಗ್ಗ) : ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ, ಡಿನೋಟಿಫಿಕೇಷನ್
* ಜನಾರ್ದನ ರೆಡ್ಡಿ (ಎಂಎಲ್‌ಸಿ) : ಅಕ್ರಮ ಗಣಿಗಾರಿಕೆ
* ಕಟ್ಟಾ ಸುಬ್ರಮಣ್ಯ ನಾಯ್ಡು (ಹೆಬ್ಬಾಳ) : ಭೂ ಕಬಳಿಕೆ
* ಹರತಾಳು ಹಾಲಪ್ಪ (ಸೊರಬ) : ಸ್ನೇಹಿತನ ಹೆಂಡತಿಯ ಅತ್ಯಾಚಾರ
* ವೈ ಸಂಪಂಗಿ (ಕೆಜಿಎಫ್) : ಲಂಚ
* ಕೃಷ್ಣಯ್ಯ ಶೆಟ್ಟಿ (ಮಾಲೂರು) : ಭೂ ಕಬಳಿಕೆ
* ಎಸ್.ಆರ್. ವಿಶ್ವನಾಥ್ (ಯಲಹಂಕ) : ಅಕ್ರಮ ಆಸ್ತಿ ಗಳಿಕೆ
* ವಿ ಸೋಮಣ್ಣ (ಎಂಎಲ್‌ಸಿ) : ಡಿನೋಟಿಫಿಕೇಷನ್, ಅಕ್ರಮ ಗಣಿಗಾರಿಕೆ
* ಕೆಜಿ ಬೋಪಯ್ಯ (ಕೊಡಗು) : ವಿಧಾನಸಭಾ ಸದಸ್ಯರ ವಜಾ ಪ್ರಕರಣ
* ರೇಣುಕಾಚಾರ್ಯ (ಹೊನ್ನಾಳಿ) : ನರ್ಸ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದು
* ಲಕ್ಷ್ಮಣ ಸವದಿ (ಅಥಣಿ) : ವಿಧಾನಸಭೆಯಲ್ಲಿ ಅಶ್ಲೀಲ ಎಂಎಂಎಸ್ ವೀಕ್ಷಿಸಿದ್ದು
* ಸಿಸಿ ಪಾಟೀಲ (ನರಗುಂದ) : ವಿಧಾನಸಭೆಯಲ್ಲಿ ಅಶ್ಲೀಲ ಎಂಎಂಎಸ್ ವೀಕ್ಷಿಸಿದ್ದು
* ಕೃಷ್ಣ ಪಾಲೆಮಾರ್ (ಮಂಗಳೂರು ಉತ್ತರ) : ಅಶ್ಲೀಲ ಎಂಎಂಎಸ್ ಹಂಚಿದ್ದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+