273 ಕೋಟಿ ವಿಮೆ ಹಗರಣ, ರಿಲಯನ್ಸ್ ಆರೋಪಿ

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಪರಾಧ ಸಂಚು ಮುಂತಾದ ಕಾನೂನಿನಡಿಯಲ್ಲಿ RIL ಮೇಲೆ ದೋಷಾರೋಪಣೆ ಹೊರೆಸಲಾಗಿದೆ. ನ್ಯಾಷನಲ್ ಇನ್ಸುರೆನ್ಸ್ ಕಂಪನಿ ಲಿ(NICL) ಹಗರಣಕ್ಕೆ ಸಂಬಂಧಿಸಿದಂತೆ ಮುಖೇಶ್ ಆರೋಪಿಯಾಗಿದ್ದಾರೆ.
NICL ಅಧಿಕಾರಿಗಳು ಹಾಗೂ ಖಾಸಗಿ ಟೆಲಿಕಾಂ ಸಂಸ್ಥೆ ಉದ್ಯೋಗಿಗಳ ಜೊತೆ 2002 ರಿಂದ 2004ರವರೆಗೂ ಸಂಪರ್ಕ ಏರ್ಪಟ್ಟಿದೆ.ಈ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸಿವಿಸಿ ಅಧಿಕಾರಿಗಳು ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.
NICL ತನ್ನ ನಿಯಮಗಳನ್ನು ಉಲ್ಲಂಘಿಸಿ ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಸಿಬಿಐ ಹೇಳಿಕೊಂಡಿದೆ.












Click it and Unblock the Notifications