ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಿಂದ ಗೂಳಿಹಟ್ಟಿಶೇಖರ್ ಅಮಾನತು

By Rajendra
|
Google Oneindia Kannada News

Goolihatti Shekhar
ಬೆಂಗಳೂರು, ಫೆ.3: ವಿಧಾನಸಭೆಯಲ್ಲಿಂದು ಮತ್ತೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ವಿರುದ್ಧದ ಆಕ್ರೋಶ ಭುಗಿಲೇಳಿತು. ಸಭಾಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಲೆಂದು ಕಪ್ಪುಪಟ್ಟಿ ಧರಿಸಿ ಸದನಕ್ಕೆ ಬಂದಿದ್ದ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಶೂನ್ಯ ವೇಳೆಯಲ್ಲಿ ಹಠಾತ್ತನೆ ಎದ್ದು ನಿಂತು ಗಮನ ಸೆಳೆದರು.

ಗೂಳಿಹಟ್ಟಿ ಶೇಖರ್ ಅವರಿಗೆ ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ. ಇದರಿಂದಾಗಿ ಕುಪಿತಗೊಂಡ ಶಾಸಕರು ಸಭಾಧ್ಯಕ್ಷರನ್ನು ಉದ್ದೇಶಿಸಿ ಕಳಂಕಿತ ಸಭಾಧ್ಯಕ್ಷರೇ ಎಂದು ಕರೆದಿದ್ದು ಏಕಾಏಕಿ ಕೋಲಾಹಲಕ್ಕೆ ಕಾರಣವಾಯಿತು. ಇದು ಆಡಳಿತಾರೂಢ ಪಕ್ಷದ ಶಾಸಕರನ್ನು ಕೆರಳಿಸಿತು. ಸದನದಲ್ಲಿ ಹಠಾತ್ತನೇ ಕೋಲಾಹಲ ಉಂಟಾಯಿತು.

ಬಿಜೆಪಿ ಶಾಸಕರು ಎದ್ದು ನಿಂತು ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಆಕ್ಷೇಪಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಸಭಾಧ್ಯಕ್ಷರು ಕೂಡ ಕೆರಳಿ ಕೆಂಡವಾದರು. ಗೂಳಿಹಟ್ಟಿ ಶೇಖರ್‌ರವರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಇದಕ್ಕೆ ಗೂಳಿಹಟ್ಟಿ ಶೇಖರ್ ಒಪ್ಪದಿದ್ದಾಗ ಅವರನ್ನು ಸದನದಿಂದ ಹೊರಹಾಕುವಂತೆ ಮರ್ಷಲ್‌ಗಳಿಗೆ ಸೂಚಿಸಿದರು. ಸಭಾಧ್ಯಕ್ಷರ ಈ ಆದೇಶ ಹೊರಬರುತ್ತಿದ್ದಂತೆ ಮಾರ್ಷಲ್‌ಗಳು ಗೂಳಿಹಟ್ಟಿಯವರ ಆಸನದತ್ತ ದೌಡಾಯಿಸಿದರು.

ಒಂದು ಹಂತದಲ್ಲಿ ಮಾರ್ಷಲ್‌ಗಳ ಜೊತೆಗೂ ಚಕಮಕಿ ನಡೆಯಿತು. ನಂತರ ಮಾರ್ಷಲ್‌ಗಳು ಬಲವಂತವಾಗಿ ಗೂಳಿಹಟ್ಟಿಯವರನ್ನು ಸದನದಿಂದ ಹೊರಹಾಕಲು ಯತ್ನಿಸಿದರು. ಈ ವೇಳೆ ಕಪ್ಪುಪಟ್ಟಿಯನ್ನು ಪ್ರದರ್ಶಿಸಿ ಗೂಳಿಹಟ್ಟಿ ಸಭಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ಹೀಗೆ ಘೋಷಣೆ ಕೂಗುತ್ತಿದ್ದಂತೆ ಮಾರ್ಷಲ್‌ಗಳು ಅವರನ್ನು ಬಲವಂತದಿಂದ ದಬ್ಬಿಕೊಂಡು ಹೊರಹಾಕಿದರು. ಗೂಳಿಹಟ್ಟಿ ಶೇಖರ್‌ರವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಡಲಾಗಿದೆ. (ಒನ್‌ಇಂಡಿಯಾ ಕನ್ನಡ)

English summary
Former Minister and Independent member Goolihatti D Shekhar was evicted from the Karnataka Legislative Assembly and suspended from the House for the day on Friday for addressing Speaker K G Bopaiah as tainted speaker".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X