ಜನಾರ್ದನ ರೆಡ್ಡಿ ಬಗ್ಗೆ ಸಿದ್ದರಾಮಯ್ಯ ಲೇವಡಿ

ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆದಿಶಕ್ತಿ ಹುಲಿಕೆರೆ ಅಮ್ಮ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ವಾತನಾಡಿದ ಅವರು, ಕಿರೀಟ ಕೊಟ್ಟರೂ ರೆಡ್ಡಿಯನ್ನು ದೇವರೇಕೆ ರಕ್ಷಿಸಲಿಲ್ಲ? ಎಂದು ಪ್ರಶ್ನಿಸಿದರು.
'ರೆಡ್ಡಿ ಅವರು ತಿರುಪತಿ ತಿಮ್ಮಪ್ಪನಿಗೆ ನೀಡಿದ ಕಿರೀಟ ಕಪ್ಪು ಹಣದಿಂದ ಮಾಡಿಸಿದ್ದು. ಅದಕ್ಕಾಗಿ ರೆಡ್ಡಿ ಜೈಲಿಗೆ ಹೋಗುವುದನ್ನು ದೇವರೂ ತಪ್ಪಿಸಲಾಗಲಿಲ್ಲವೇನೋ' ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯಭರಿತ ಧಾಟಿಯಲ್ಲಿ ಅವರೇ ಉತ್ತರವನ್ನೂ ಹೇಳಿದರು.
'ಭ್ರಷ್ಟತೆಯಿಂದ, ಅನ್ಯಾಯದಿಂದ ಸಂಪಾದಿಸಿದ ಹಣದಿಂದ ದೇವರಿಗೆ ಏನೇ ಕಾಣಿಕೆ ನೀಡಿದರೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಜನರು ಪ್ರಾಮಾಣಿಕವಾಗಿ ಸಂಪಾದಿಸಿದ ಹಣದಿಂದ ಕಾಣಿಕೆ ನೀಡಿ' ಎಂದು ಅವರು ಸಲಹೆ ನೀಡಿದರು.












Click it and Unblock the Notifications