ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ನಿಷೇಧ

By Rajendra
|
Google Oneindia Kannada News

Car Driving Banned for Children
ಮೈಸೂರು, ಫೆ.3: ಮೈಸೂರು ನಗರದ ನೂರಡಿ ರಸ್ತೆಯಲ್ಲಿ ಇತ್ತೀಚೆಗೆ 3 ವರ್ಷ 9 ತಿಂಗಳು ವಯಸ್ಸಿನ ಬಾಲಕನು ಗಿನ್ನಿಸ್ ದಾಖಲೆ ಮಾಡುವ ಉದ್ದೇಶದಿಂದ ಕಾರ್ ಡ್ರೈವಿಂಗ್ ಮಾಡಿದ್ದರು. ಈ ಸಂಬಂಧ ರವೀಂದ್ರ ಬಿಳಿಯೂರು ಎಂಬುವವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಸಂಬಂಧ ಆಯೋಗವು ದಿನಾಂಕ 2.11.2011ರಂದು ಅಂತಿಮ ಆದೇಶ ನೀಡಿರುತ್ತದೆ.

ಈ ಆದೇಶದಲ್ಲಿ ಮಾಡಿರುವ ಕೆಲವು ಶಿಫಾರಸ್ಸುಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಕಾರು ಚಾಲನೆ ಮಾಡುವಂತಿಲ್ಲ. ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಚಾಲಕರು ವಾಹನ ಚಲಾಯಿಸದಂತೆ ಮೈಸೂರು ನಗರದಲ್ಲಿ ಅರಿವನ್ನು ಉಂಟುಮಾಡಲು ತಿಳಿಸಲಾಗಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಮೋಟಾರು ವಾಹನ ಕಾಯ್ದೆಯ ಮತ್ತು ನಿಯಮಗಳ ಉಲ್ಲಂಘನೆ ಆಗುವುದರಿಂದ ಇದು ಶಿಕ್ಷಾರ್ಹ ಅಪರಾಧವಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡದಿರಲು ಮತ್ತು ಇಂತಹ ಕ್ರಮಕ್ಕೆ ಪೋಷಕರು ಮತ್ತು ಸಾರ್ವಜನಿಕರು ಪ್ರೋತ್ಸಾಹಿಸದಿರಲು ಹಾಗೂ ಉತ್ತೇಜಿಸದಿರಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
The Karnataka State Commission for Protection of Child Rights (KSCPCR) vehicle driving banned for children. The commission ordered that minority children should not dirve a car. ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ನಿಷೇಧ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X