ಯಡಿಯೂರಪ್ಪನವರನ್ನು ಹಾಡಿ ಕೊಂಡಾಡಿದ ಮುನಿಯಪ್ಪ
ತುಮಕೂರು,
ಫೆ 3 : ಕರ್ನಾಟಕ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ಕೂಡಾ ಒಬ್ಬರು. ಅವರು ಅಭಿವೃದ್ದಿಯ ಹರಿಕಾರ, ಅವರ ಮೇಲಿನ ಆಪಾದನೆಗಳು ಇನ್ನೂ ಸಾಬೀತಾಗಿಲ್ಲ ಎಂದು ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಬಿಎಸ್ವೈ ಅವರನ್ನು ಹಾಡಿ ಕೊಂಡಾಡಿದ್ದಾರೆ. id="toptextpromo">ಯಡಿಯೂರಪ್ಪ
ಅವರನ್ನು ಹೋಗಳಲೆಂದೇ ಸಮಯ ಮೀಸಲಿಟ್ಟ ಹಾಗೆ ಮಾತನಾಡಿದ ಮುನಿಯಪ್ಪ, ಯಡಿಯೂರಪ್ಪ ಅವರಲ್ಲಿ ಕ್ರಾಂತಿಕಾರಿ ಮನೋಭಾವವಿದೆ. ತಾಳ್ಮೆ ಸ್ವಭಾವದ ಅವರು ಸಮರ್ಥವಾಗಿ ಕೆಲಸ ಮಾಡುವ ಮನೋಭಾವ ಹೊಂದಿದ್ದಾರೆಂದು ಮುನಿಯಪ್ಪ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿ
ರೈಲ್ವೆ ಯೋಜನೆಗಳಿಗೆ ನೆರವು ನೀಡುವಂತೆ ನಾನು ಅವರನ್ನು ಕೇಳಿದಾಗ ಯೋಜನೆಯ ಪಟ್ಟಿ ಕೊಡಿ, ಸೌಲಭ್ಯ ಒದಗಿಸಲು ಸಿದ್ದನಿದ್ದೇನೆ ಎಂದ ಯಡಿಯೂರಪ್ಪ ಅರ್ಧ ಹಣಕಾಸಿನ ನೆರವಿನ ಜೊತೆ ಭೂಮಿಯನ್ನು ಅತ್ಯಂತ ವೇಗಾವಾಗಿ ನೀಡಿದ ದೇಶದ ಮೊದಲ ಮುಖ್ಯಮಂತ್ರಿ ಎಂದು ಮುನಿಯಪ್ಪ ಯದ್ದಿಯವರನ್ನು ಕೊಂಡಾಡಿದ್ದಾರೆ.











Click it and Unblock the Notifications