ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು
ಒಸ್ಮಾನಾಬಾದ್,
ಫೆ. 2 : ಸಾವಿಗೀಡಾಗಿದ್ದ ವ್ಯಕ್ತಿಯನ್ನು ಸಾಗಿಸುತ್ತಿದ್ದ ಕರ್ನಾಟಕದ ಆಂಬುಲನ್ಸ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮರಣಕ್ಕೀಡಾದ ಭೀಕರ ಘಟನೆ ಗುರುವಾರ ಬೆಳಗಿನ ಜಾವ ಒಸ್ಮಾನಾಬಾದ್ ಜಿಲ್ಲೆಯ ವಡಗಾಂವ್ ಬಳಿ ನಡೆದಿದೆ. id="toptextpromo">ಸೊಲ್ಲಾಪುರ-ಒಸ್ಮಾನಾಬಾದ್
ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಆಂಬುಲನ್ಸ್ ಔರಂಗಾಬಾದಿಗೆ ತೆರಳುತ್ತಿತ್ತು. ಅಪಘಾತದಲ್ಲಿ ಆಂಬುಲನ್ಸ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಸ್ಸು
ಒಸ್ಮಾನಾಬಾದಿನಿಂದ ಸತಾರಾಗೆ ತೆರಳುತ್ತಿತ್ತು. ಈ ಘಟನೆಯಲ್ಲಿ ಬಸ್ಸಲ್ಲಿದ್ದ ಹನ್ನೊಂದಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಒಸ್ಮಾನಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.











Click it and Unblock the Notifications