• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಮ್ಮಾರ್ ಹಗರಣ:ತಿರುಪತಿ ಸುಬ್ರಹ್ಮಣ್ಯ ಸಹ ಭಾಗಿ

By Srinath
|
ಹೈದರಾಬಾದ್, ಫೆ. 2: ಎಮ್ಮಾರ್ ಟೌನ್‌ಶಿಪ್ ಹಗರಣದಲ್ಲಿ ಅನೇಕ ಅಚ್ಚರಿಯ ಬೆಳವಣಿಗೆಗಳು ಕಂಡುಬರುತ್ತಿವೆ. ತಿರುಪತಿಯ ಆಡಳಿತಾಧಿಕಾರಿ, ಐಎಎಸ್ ಬಾಬು ಎಲ್ ವಿ ಸುಬ್ರಹ್ಮಣ್ಯ ಸಹ ಭಾಗಿಯಾಗಿದ್ದಾರೆ ಎಂದು ಸಿಬಿಐ ತಿಳಿಸಿದೆ. ಹಗರಣದಲ್ಲಿ ಸುಬ್ರಹ್ಮಣ್ಯ ಪಾತ್ರದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಅವರ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಚೀಪ್ ಸೆಕ್ರೆಟರಿಗೆ ಪತ್ರ ಬರೆಯಲಾಗಿದೆ ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಹೇಳಿದ್ದಾರೆ,

ಈ ಮಧ್ಯೆ, ಮೊನ್ನೆ ಬಂಧನಕ್ಕೊಳಗಾದ ಬಿಪಿ ಆಚಾರ್ಯರನ್ನು ಸೇವೆಯಿಂದ ಅಮಾನತುಗೊಳಸಿಲಾಗಿದೆ. ಜತೆಗೆ ಅವರನ್ನು ಫೆ. 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿರುಪತಿ ಸುಬ್ರಹ್ಮಣ್ಯ ಅವರು ಆಚಾರ್ಯರಿಗೆ ಐಎಎಸ್ ಬ್ಯಾಚ್ ಮೇಟ್! ಇಂತಿಪ್ಪ ಸುಬ್ರಹ್ಮಣ್ಯ, ಚಂದ್ರಬಾಬು ನಾಯ್ಡು ಮತ್ತು ವೈಎಸ್ಆರ್ ರೆಡ್ಡಿ ಆಡಳಿತದಲ್ಲಿ ಆಯಕಟ್ಟಿನ ಜಾಗಗಳನ್ನು ಅಲಂಕರಿಸಿ, ಎರಡೂ ಮಾ.ಮು.ಗಳಿಗೆ ತುಂಬಾ ಹತ್ತಿರದವರಾಗಿದ್ದರು.

ಜತೆಗೆ, ಮತ್ತೊಬ್ಬ ಮಾಜಿ ಐಎಎಸ್ ಅಧಿಕಾರಿ ಕೆ ವಿಶ್ವೇಶ್ವರರಾವ್ (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಯಾಗಿ ಸ್ವಯಂನಿವೃತ್ತಿ) ಅವರ ಹೆಸರನ್ನೂ ಪ್ರಕರಣದ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ವಿಶ್ವೇಶ್ವರರಾವ್ ಮಾಜಿ ಕೇಂದ್ರ ಸಚಿವ ಪಿವಿ ರಂಗಯ್ಯ ನಾಯ್ಡು ಅವರ ಅಳೀಮಯ್ಯ. ಕುತೂಹಲದ ಬೆಳವಣಿಗೆಯಲ್ಲಿ ಪ್ರಕರಣದ ಸಂಬಂಧ ಮಾಫೀ ಸಾಕ್ಷಿಯಾಗಲು ಒಪ್ಪಿರುವ ಸ್ಟೈಲಿಶ್ ಹೋಮ್ಸ್ ಕಂಪನಿಯು ಮುಖ್ಯಸ್ಥ ಟಿ. ರಂಗಾರಾವ್ ಗೆ ಸಿಬಿಐ ಕೋರ್ಟ್ ಬುಧವಾರ ಜಾಮೀನು ನೀಡಿದೆ.

ಕಳೆದ ಜೂನ್ ತಿಂಗಳಲ್ಲಿ ಟಿಟಿಡಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ತಿರುಪತಿ ಸುಬ್ರಹ್ಮಣ್ಯ ಮತ್ತು ಕೆವಿ ರಾವ್ ಅವರು ಎಮ್ಮಾರ್ ಟೌನ್‌ಶಿಪ್ ಹಗರಣದಲ್ಲಿ 2002ರಿಂದ 2010ರ ನಡುವೆ ತೆಗೆದುಕೊಂಡ ನಿರ್ಣಯಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವುಟಾಗಿದೆ ಎಂದು ಸಿಬಿಐ ಆರೋಪಿಸಿದೆ. ಮೊನ್ನೆ ಬಂಧನಕ್ಕೊಳಗಾದ ಮತ್ತೊಬ್ಬ ಐಎಎಸ್, ಹಾಲಿ ಗೃಹ ಕಾರ್ಯದರ್ಶಿ ಆಚಾರ್ಯರನ್ನು ಪ್ರಕರಣದಲ್ಲಿ (A1) ಮೊದಲ ಆರೋಪಿಯನ್ನಾಗಿಸಿದೆ. ಒಟ್ಟು 12 ಮಂದಿಯನ್ನು ಆರೋಪಿಗಳೆಂದು ಸಿಬಿಐ ಗುರುತಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ವಿವಿ ಲಕ್ಷ್ಮಿನಾರಾಯಣ ಸುದ್ದಿಗಳುView All

English summary
Emaar town Ship scam developments are interesting. Executive Officer of Tirumala Tirupati Devasthanams L.V. Subrahmanyam and retired IAS official K.V. Rao were the surprise additions in the chargesheet. The CBI has alleged that the two officials were responsible for the change in policy that led to a huge loss for the government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more