ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್.ಕಾಂ ಜಂಗ್ಲಿಯಾಗಿ ಭಾರತಕ್ಕೆ ಪ್ರವೇಶ

By Mahesh
|
Google Oneindia Kannada News

Amazon.com enters India
ನವದೆಹಲಿ, ಫೆ.2: ವಿಶ್ವ ಅತಿವಿಸ್ತೃತ ಆನ್ ಲೈನ್ ರೀಟೈಲ್ ಮಾರಾಟ ಸಂಸ್ಥೆ ಗುರುವಾರ ಭಾರತಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಅಮೆಜಾನ್.ಕಾಂ ತನ್ನ ಶಾಪಿಂಗ್ ವೆಬ್ ಸೈಟ್ junglee.com ಆರಂಭಿಸುವ ಮೂಲಕ ತ್ವರಿತವಾಗಿ ಬೆಳೆಯುತ್ತಿರುವ ಇ ಕಾಮರ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

17 ವರ್ಷದ ಆನ್ ಲೈನ್ ಶಾಪಿಂಗ್ ಮಾರುಕಟ್ಟೆ ಅನುಭವದ ನಂತರ ಭಾರತಕ್ಕೆ ಕಾಲಿರಿಸಿರುವ ಅಮೆಜಾನ್.ಕಾಂಗೆ ಏಷ್ಯಾದಲ್ಲಿ ಅತ್ಯಂತ ಬಳಕೆಯಲ್ಲಿರುವ Flipkart ಹಾಗೂ MakeMyTrip Ltd ವೆಬ್ ತಾಣಗಳು ಸ್ಪರ್ಧೆ ನೀಡುವ ಸಾಧ್ಯತೆಯಿದೆ.

14,000 ಕ್ಕೂ ಅಧಿಕ ಭಾರತೀಯ ಹಾಗೂ ಜಾಗತಿಕ ಬ್ರ್ಯಾಂಡ್ ಗಳ 12 ದಶಲಕ್ಷ ಉತ್ಪನ್ನಗಳು ಜಂಗ್ಲಿ.ಕಾಂನಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ. ಅಮೆಜಾನ್ ನ ಹೆಚ್ಚು ಮಾರಾಟವಾಗುವ ಉತ್ಪನ್ನವಾದ Kindle ಇ ಬುಕ್ ರೀಡರ್ ಮಾರಾಟದ ಮೇಲೆ ಹೆಚ್ಚಿನ ವಿಶ್ವಾಸವನ್ನು ಸಂಸ್ಥೆ ಹೊಂದಿದೆ.

ಪುಸ್ತಕ ಮಾರಾಟಕ್ಕೆ ಮಾತ್ರ ಮೀಸಲಾಗಿದ್ದ ಅಮೆಜಾನ್.ಕಾಂ, ಈಗ ಭಾರತದ ಫ್ಯಾಷನ್ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿತ್ತು. ಈಗ ಗ್ರಾಹಕರು ಅಮೆಜಾನ್ ಒಡೆತನದ ಮೈಹಾಬಿಟ್.ಕಾಂ ಹಾಗೂ ಎಂಡ್ ಲೆಸ್ .ಕಾಂ ತಾಣಗಳ ಮೂಲಕ ತಮಗೆ ಇಷ್ಟವಾದ ಅಂತಾರಾಷ್ಟೀಯ ಗುಣಮಟ್ಟದ ಬ್ರ್ಯಾಂಡ್ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದುಮೆಜಾನ್ ಸಂಸ್ಥೆ ಅಮಿತ್ ಅಗರ್ ವಾಲ್ ಹೇಳಿದ್ದಾರೆ.

ಭಾರತದಲ್ಲಿ ಆನ್ ಲೈನ್ ಪುಸ್ತಕ ಖರೀದಿ ಶೇ.15 ರ ಗತಿಯಲ್ಲಿ ಪ್ರಗತಿ ಕಾಣುತ್ತಿದೆ. ಸುಮಾರು 9.34 ಬಿಲಿಯನ್($1 = 49.27 Indian rupees) ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು Internet and Mobile Association of India ಹೇಳಿದೆ.

English summary
The world's largest online retailer Amazon.com Inc enters Indian e-commerce market on Thursday(Feb.2) Amazon.com launched its shopping website junglee.com in India after its Seventeen years online debut. Junglee.com will offer more than 12 million products from over 14,000 Indian and global brands
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X