ಅಣ್ಣಾ ಹಜಾರೆ ರಾಜಕೀಯ ಸೇರಲಿ: ಇಮ್ರಾನ್ ಖಾನ್
ನವದೆಹಲಿ,
ಜ.31: ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ರಾಜಕೀಯ ಪ್ರವೇಶಿಸುವುದು ಒಳ್ಳೆಯದು. ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಇನ್ನಷ್ಟು ಬಲಬರುತದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರು ಸಲಹೆ ನೀಡಿದ್ದಾರೆ. id="toptextpromo">ಸಮಾನ
ಮನಸ್ಕರನ್ನು ಒಗ್ಗೂಡಿಸಿ ಸಣ್ಣ ಪಕ್ಷವಾದರೂ ಅಣ್ಣಾ ಹಜಾರೆ ರಾಜಕೀಯ ಕಣಕ್ಕೆ ಇಳಿಯುವುದು ಒಳ್ಳೆಯದು. ಇಲ್ಲಿ ಪವರ್ ಇಲ್ಲದಿದ್ದರೆ ಏನು ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ತೊಲಗಿಸಲು ಅಧಿಕಾರಯುತವಾಗಿ ಹುಕುಂ ಚಲಾಯಿಸಲು ರಾಜಕೀಯ ಪಕ್ಷ, ಹುದ್ದೆ ಬೇಕಾಗುತ್ತದೆ. id='are-slot-1' class='oiad oi-axt oiadv'> id='top-searched-articles'>ಪಾಕಿಸ್ತಾನದಲ್ಲೂ
ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಯುತ್ತಿದೆ.ಆದರೆ, ಸರ್ಕಾರ ಅದನ್ನು ಹತ್ತಿಕ್ಕುತ್ತಿದೆ. ಸುಪ್ರೀಂಕೋರ್ಟ್ ಆದೇಶಗಳನ್ನು ಸರ್ಕಾರ ಬದಿಗೊತ್ತುತ್ತಿದೆ. ಜನ ಬೆಂಬಲ ಇಲ್ಲದಿದ್ದರೆ ಏನು ಸಾಧ್ಯವಿಲ್ಲ ಎಂಬುದನ್ನು ಅಣ್ಣಾ ಅವರು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಂಡಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.











Click it and Unblock the Notifications