ಯಡ್ಡಿ ಪರ ತಿಪ್ಪೆಸಾರಿಸಿದ ಲೋಕಾಯುಕ್ತ ಪೊಲೀಸ್:ದತ್ತಾ

ದತ್ತಾ ವಾಗ್ಬಾಣ, ಅವರ ಮಾತುಗಳಲ್ಲೇ ಕೇಳಿ:
'ಅಲ್ಲಾ ಸ್ವಾಮಿ ನಾನು ದೂರುದಾರ. ದೂರು ದಾಖಲಾದ ದಿನದಿಂದ ಲಾಗಾಯ್ತು ಇಷ್ಟೂ ದಿನ ಒಂದೇ ಒಂದು ಬಾರಿಯೂ ನನ್ನನ್ನು ಲೋಕ ಪೊಲೀಸರು ಸಂಪರ್ಕಿಸಲಿಲ್ಲ. ಏನಪಾ ನಿನ್ನ ದೂರಿನ ವಿಚಾರ. ನಿನ್ನಲ್ಲಿರುವ ದಾಖಲೆಗಳು ಏನು? ಅಂತ ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ'
'ಇದೆಂಥಾ ತನಿಖೆ ಸ್ವಾಮಿ ದೂರು ನೀಡಿದವರನ್ನು ಒಮ್ಮೆಯೂ ಪ್ರಶ್ನಿಸುವುದು ಬೇಡ್ವಾ. ಇದರರ್ಥ ಇಷ್ಟೆ. ಇಡೀ ಪ್ರಕರಣವನ್ನು ಹಳ್ಳ ಹಿಡಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸುವ ಹಿಂದಿನ ದಿನ ಅಂದರೆ ಜನವರಿ 29ರಂದು (ಭಾನುವಾರ) ನನಗೆ ನೋಟಿಸ್ ಕೊಡುವ ಜರೂರತ್ತಾದರೂ ಏನು?'
ಲೋಕಾಯುಕ್ತ ವಿಶೇಷ ಕೋರ್ಟಿಗೆ ಇಂದು (ಜ.30) ಬಿ ರಿಪೋರ್ಟ್ ಸಲ್ಲಿಸಿ, ಯಡಿಯೂರಪ್ಪ ಅವರು ಯಾವುದೇ ಅಕ್ರಮ ಎಸಗಿಲ್ಲ ಎಂದಿದ್ದಾರೆ. ಇದೇ ವೇಳೆ ದೂರುದಾರ ವೈಎಸ್ ವಿ ದತ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.












Click it and Unblock the Notifications