ಕಾಲ ಬರಲಿ ಎಲ್ಲ ಬಿಚ್ಚಿಡ್ತೀನಿ: ಯಡಿಯೂರಪ್ಪ

disclose-everything-when-time-ripens-yeddyurappa
ಶಿವಮೊಗ್ಗ, ಜ. 27: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮಡುವುಗಟ್ಟಿರುವ ದುಃಖ, ಹತಾಶೆ ಇನ್ನೂ ಘನವಾಗುತ್ತಲೇ ಸಾಗಿದೆ. 'ನಾವೆಲ್ಲ ಒಂದೇ. ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ' ಎಂದು ಅವರು ಮೇಲ್ಮೈನಲ್ಲಿ ಹೇಳುತ್ತಿದ್ದರೂ ಆಳದಲ್ಲಿ ಹಳೆಯ ಸಂಗತಿಗಳು ಕುದಿಯುತ್ತಿವೆ. 'ಹೇಳೋದು ಸಾಕಷ್ಟಿದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚ್ಯವಾಗಿ ತಿಳಿಸಿದ್ದಾರೆ.

ನಗರದ ವಕೀಲರ ಸಂಘದ ಕಟ್ಟಡ ಉದ್ಘಾಟನೆ ನೆರವೇರಿಸಿದ ನಂತರ ಮಾತನಾಡಿದ ಅವರು, 'ಇಂತಹ ವೇದಿಕೆಯಲ್ಲಿ ಆ ವಿಷಯಗಳನ್ನು ಪ್ರಸ್ತಾಪಿಸುವುದಿಲ್ಲ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ' ಎಂದಷ್ಟೆ ಹೇಳಿದರು.

ಶಾಸಕಾಂಗ, ಕಾರ್ಯಾಂಗದ ಜೊತೆ ಜೊತೆಯಲ್ಲಿಯೇ ನ್ಯಾಯಾಂಗವೂ ಕೂಡ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ. ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಶಾಸಕಾಂಗ ಹಾಗೂ ಕಾರ್ಯಾಂಗ ತನ್ನ ಕೆಲಸಗಳಿಂದ ವಿಮುಖವಾದಾಗ ಎಚ್ಚರಿಸುವ ಹಾಗೂ ತಿದ್ದುವ ಕೆಲಸವನ್ನು ನ್ಯಾಯಾಂಗ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಸಂಸದ ಬಿವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಸಿದ್ರಾಮಣ್ಣ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಮಹಾಲಕ್ಷ್ಮಿ ನೇರಳೆ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಪ್ಪ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+