ಬನ್ನೂರು ಲಾಬಿ ಹಿಂದೆ ಕ್ರಿಮಿನಲ್ ಶಕ್ತಿ: ಭಾರದ್ವಾಜ್ ಭಲ್ಲೆ ಭಲ್ಲೆ

ಇದೇ ವೇಳೆ, ಲೋಕಾಯುಕ್ತ ಹುದ್ದೆಗೆ ಬನ್ನೂರುಮಠರನ್ನೇ ನೇಮಕ ಮಾಡಬೇಕು ಎಂದು ಸರಕಾರ ಹಠ ಹಿಡಿದಿದೆ. ಆದರೆ, ಎಷ್ಟೇ ಒತ್ತಡ ಹೇರಿದರೂ ತನ್ನ ನಿರ್ಧಾರವನ್ನು ಬದಲಾಯಿಕೊಳ್ಳಲಾರೆ ಎಂದೂ ಭಾರದ್ವಾಜ್ ಕಡ್ಡಿ ಮುರಿದಂತೆ ಹೇಳಿದರು.
ಲೋಕಾಯುಕ್ತರನ್ನಾಗಿ ನ್ಯಾ ಬನ್ನೂಮಠರ ಹೆಸರನ್ನು ಸರಕಾರ ಪದೇ ಪದೇ ಶಿಫಾರಸು ಮಾಡುತ್ತಿದೆ. ಈ ವಿಷಯದಲ್ಲಿ ಲೋಕಾಯುಕ್ತ ವರದಿ ಹಾಗೂ ಲೋಕಾಯುಕ್ತ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಕ್ರಿಮಿನಲ್‌ಗಳ ಕೈವಾಡವಿದೆ. ಅವರು ಈ ಹಿಂದೆ ಅಧಿಕಾರದಲ್ಲಿದ್ದರು. ಆದರೆ, ಈಗ ಅಧಿಕಾರದಿಂದ ಕೆಳಗಿಳಿದಿದ್ದರೂ, ರಾಜಕೀಯವಾಗಿ ತುಂಬಾ ಪ್ರಭಾವಿಗಳಾಗಿದ್ದಾರೆ. ಅವರು ಯಾರು ಎಂಬುದನ್ನೂ ನಾನು ಬಲ್ಲೆ ಎಂದು ಭಾರದ್ವಾಜ್ ಭಲ್ಲೆ ಭಲ್ಲೆ ಎಂದರು.
ನ್ಯಾ ಬನ್ನೂರುಮಠರನ್ನೇ ಲೋಕಾಯುಕ್ತಕ್ಕೆ ನೇಮಕ ಮಾಡಬೇಕು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ 10 ಪುಟಗಳ ಪತ್ರ ಬರೆದು ಕೋರಿದ್ದಾರೆ. ಈ ಪತ್ರವನ್ನು ಕೆಲವರ ಒತ್ತಡದ ಮೇಲೆ ಅವರು ಬರೆದಿದ್ದಾರೆ ಎಂಬುದು ನನಗೆ ಗೊತ್ತು. ಒತ್ತಡ ಹಾಕಿ ಪತ್ರ ಬರೆಸಿದವರು ಯಾರು ಎಂಬುದೂ ಸಹ ಗೊತ್ತು. ಆದರೆ, ಅವರ ಹೆಸರನ್ನು ಈಗ ಬಹಿರಂಗ ಪಡಿಸಲಾರೆ.
ಬನ್ನೂರು ಮಠರ ಹೆಸರನ್ನು ತಿರಸ್ಕರಿಸಿದ್ದು, ಲೋಕಾಯುಕ್ತ ಹುದ್ದೆಗೆ ಸೂಕ್ತ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಸೂಚಿಸುವಂತೆ ಸರಕಾರಕ್ಕೆ ಈಗಾಗಲೇ ಸಂದೇಶ ಕಳುಸಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಭಾರದ್ವಾಜ್ ಉತ್ತರಿಸುತ್ತಾ ತಿಳಿಸಿದರು.












Click it and Unblock the Notifications