ಗಾಂಧಿಬಜಾರ್ ಮಾರುಕಟ್ಟೆ ನೆಲಸಮ ಶಾಶ್ವತವಾ?

ಇದು ಬಸವನಗುಡಿ ಜನ ಆತಂಕದಿಂದ, ಸಿನಿಕತನದಿಂದ ಕೇಳುತ್ತಿರುವ ಪ್ರಶ್ನೆ. ಹೌದು ಇಲ್ಲಿ ಸಿನಿಕತನ ಏನಪಾ ಅಂದರೆ ಗಾಂಧಿಬಜಾರ್ ಮಾರುಕಟ್ಟೆಗಳನ್ನು ವಕ್ಕಲೆಬ್ಬಿಸುವ ಯೋಜನೆಗಳ ಬಗ್ಗೆ ಜನ ನಿಜಕ್ಕೂ ರೋಸಿ ಹೋಗಿದ್ದಾರೆ. ಅಂಗಡಿಗಳನ್ನು ಬೀಳಿಸುವ ಕಾರ್ಯಕ್ರಮಗಳು ನಮ್ಮ ಕಣ್ಣೊರೆಸುವ ತಂತ್ರ ಎಂದು ಬಸವನಗುಡಿ ಮಂದಿ ಮಾತನಾಡಿಕೊಳ್ಳುತ್ತಾರೆ.
ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)
ಅನೇಕ ದಶಕಗಳಿಂದಲೂ ಈ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ರಮ ನಡೆದು ಬರುತ್ತಿದೆ. ಕಾರ್ಪೊರೇಟರೋ, ಶಾಸಕ, ಕೊನೆಗೆ ಬೆಂಗಳೂರು ಉಸ್ತುವಾರಿ ಸಚಿವನೋ ಅಥವಾ ಬೆಂಗಳೂರು ದಕ್ಷಿಣದ ಸಂಸದನೋ ಅಥವಾ ಮತ್ಯಾವುದೋ ಮಣ್ಣು ಮಸಿ ಒತ್ತಡಕ್ಕೆ ಸಿಕ್ಕಿ ಅಂಗಡಿಗಳನ್ನು ತೆರವುಗೊಳಿಸುವ ನಾಟಕವಾಡಿದರೂ ಮರುದಿನ ಬೆಳಗ್ಗೆ ವೇಳೆಗೆ ಆ ಅಂಗಡಿಗಳು ಧುತ್ತನೇ ಪ್ರತ್ಯಕ್ಷವಾಗುತ್ತಿದ್ದವು.
ಅದಕ್ಕೇ ಜನ ಈಗ ಕೇಳುತ್ತಿರುವುದು ಗಾಂಧಿಬಜಾರ್ ಮಾರುಕಟ್ಟೆ ನೆಲಸಮ ಶಾಶ್ವತವಾ? ಅಂತ. ಇದಕ್ಕೆ ತಕ್ಷಣಕ್ಕೆ ಉತ್ತರ ಸಿಗುವುದಿಲ್ಲವಾದರೂ ಧ್ವಂಸಗೊಳಿಸಿರುವ ರೀತಿ ನೀತಿ ನೋಡಿದರೆ ಇದು ಕಾಯಂ ಆದ ಕೆಲಸವೇ ಅನ್ನಬಹುದು. ಅಷ್ಟರ ಮಟ್ಟಿಗೆ ಸರಕಾರ ಪಕ್ಕಾ ಕೆಲಸ ಮಾಡಿದೆ.











Click it and Unblock the Notifications