ಗಾಂಧಿಬಜಾರ್ ವಿದ್ಯಾರ್ಥಿ ಭವನ್ ದೋಸೆಗೆ ಏನಾಯ್ತು!?

gandhi-bazaar-vidyarthi-bhavan-dosa-safe
ಬೆಂಗಳೂರು, ಜ.24: 'ಹೌದಾ! ಗಾಂಧಿಬಜಾರ್ ಮಾರುಕಟ್ಟೆಗಳನ್ನೆಲ್ಲ ನಗರಪಾಲಿಕೆಯವರು ನೆಲಸಮ ಮಾಡಿದ್ದಾರಂತೆ. Oh my God! ನಂಬಲಿಕ್ಕೇ ಆಗ್ತಿಲ್ಲ. ಹಾಗಾದರೆ ಅಲ್ಲಿದ್ದ ವಿದ್ಯಾರ್ಥಿ ಭವನ್, ರೋಟಿ ಘರ್ ಳಿಗೂ ಪೆಟ್ಟು ಬಿತ್ತಾ? ಅಲ್ಲಿ ಇನ್ಮುಂದೆ ಮಸಾಲೆ ದೋಸೆ ಸಿಗೋಲ್ವಾ?' ಎಂದು ವಿದೇಶಗಳಿಂದಲೂ ಜನ ದಟ್ಸ್ ಕನ್ನಡಕ್ಕೆ ಮೇಲ್ ಮಾಡಿ ಆತಂಕದಿಂದ ಕೇಳುತ್ತಿದ್ದಾರೆ.

hold on! ನಿಮ್ಮ ವಿದ್ಯಾರ್ಥಿ ಭವನ್ ಮಸಾಲೆ ದೋಸೆಗೆ, ರೋಟಿ ಘರ್ ನ ರುಚಿಕಟ್ಟಾದ ತಿಂಡಿತಿನಿಸಿಗೆ ಯಾವುದೇ ಧಕ್ಕೆ ಬಂದಿಲ್ಲ. ಖಂಡಿತಾ ಈ ಬಾರಿ ಬಸವನಗುಡಿಗೆ ಬಂದಾಗ ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು. ಇನ್ನಷ್ಟು ಪ್ರಶಾಂತವಾಗಿ ಕುಳಿತು ಮಸಾಲೆ ದೋಸೆ ಮುರಿಯಬಹುದು.

ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)

ಸದ್ಯಕ್ಕೆ ಇಲ್ಲಿನ ಹೋಟೆಲುಗಳ ಮುಂದೆಲ್ಲ ಯಾವುದೋ ಪುರಾತನ ನಗರದ ಪಳೆಯುಳಿಕೆಗಳಂತೆ ಹಣ್ಣೂ, ಹೂ, ತರಕಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆಯಾದರೂ ಮುಂದಿನ ದಿನಗಳಲ್ಲಿ ಸ್ವಚ್ಛತೆ ಇಲ್ಲಿ ಮೈಗೂಡಲಿದೆ ಎಂದು ಬಸನವಗುಡಿ ಜನ ಚುಮುಚುಮು ಚಳಿಯಲ್ಲಿ ಕಾಫಿ ಹೀರುತ್ತಾ ದೂರದ ಜನಕ್ಕೆ ಭರವಸೆಯ ಸಂದೇಶ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+