ಫೆ.4ಕ್ಕೆ ಚಿದಂಬರಂಗೆ ಏನು ಕಾದಿದೆಯೋ?

2g-scam-swamy-chidambaram-court-order-feb4
ನವದೆಹಲಿ, ಜ.23: 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ವಿರುದ್ಧ ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಜನತಾ ಪಾರ್ಟಿಯ ಸುಬ್ರಹ್ಮಣ್ಯನ್‌ ಸ್ವಾಮಿ ಸಾಕ್ಷ್ಯಗಳನ್ನು ಒದಗಿಸಿ, ವಾದ ಮಂಡನೆ ಮುಗಿಸಿದ್ದಾರೆ. 'ಈ ಬಗ್ಗೆ ಫೆ. 4ರಂದು ತೀರ್ಪು ಘೋಷಿಸಲಾಗುವುದು' ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಒ ಪಿ ಸೈನಿ ಹೇಳಿದ್ದಾರೆ.

ಆದ್ದರಿಂದ ಚಿದಂಬರಂ ಅವರನ್ನು ಶಿಕ್ಷೆಗೊಳಪಡಿಸಬೇಕು ಎಂದು ಜನತಾ ಪಾರ್ಟಿಯ ಸುಬ್ರಹ್ಮಣ್ಯನ್‌ ಸ್ವಾಮಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ದಿಲ್ಲಿ ಕೋರ್ಟ್‌ ತನ್ನ ತೀರ್ಪನ್ನು ಫೆ. 4ಕ್ಕೆ ಕಾದಿರಿಸಿದೆ.

ವಾದ ಮಂಡನೆ ವೇಳೆ ಕೋರ್ಟಿಗೆ ಸಾಕ್ಷ್ಯಗಳನ್ನು ಒದಗಿಸಿದ ಸ್ವಾಮಿ 'ಈ ಸಾಕ್ಷ್ಯಗಳು ಹೇಳುವಂತೆ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಚಿದಂಬರಂ ಅವರದ್ದೂ ಇದೆ ಎಂದರು. ರಾಜಾ ಮತ್ತು ಚಿದಂಬರಂ ಇಬ್ಬರೂ ಅಪರಾಧದಲ್ಲಿ ಪಾಲುದಾರರು.

ಚಿದಂಬರಂ ಈ ಹಗರಣದಲ್ಲಿ ಸಂಚು ರೂಪಿಸಿ ಶಾಮೀಲಾಗಿರುವುದು ಸ್ಪಷ್ಟ' ಎಂದು ಅವರು ಆರೋಪಿಸಿದರು. ಸ್ವಾನ್‌ ಟೆಲಿಕಾಂನ ಮತ್ತು ಯುನಿಟೆಕ್‌ ವಯರ್ ಲೆಸ್‌ ಕಂಪನಿಯ ಷೇರುಗಳನ್ನು ಎಟಿಸಲಾಟ್‌ ಮತ್ತು ಟೆಲಿನಾರ್ ಕಂಪನಿಗಳಿಗೆ ಮಾರುವಂತೆ ಮಾಡುವ ತಂತ್ರದಲ್ಲೂ ಚಿದಂಬರಂ ಕೈವಾಡವಿದೆ ಎಂದೂ ಸ್ವಾಮಿ ಆರೋಪಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+