ಯಲಹಂಕ ಬಿಎಂಟಿಸಿ ಸಿಬ್ಬಂದಿ ಮುಷ್ಕರ, ಬಸ್ ಇಲ್ಲ

ಸೋಮವಾರ ಕಚೇರಿಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದತ್ತ ತೆರಳಬೇಕಾದ ಪ್ರಯಾಣಿಕರೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಭಾನುವಾರ ಸಂಜೆ ಕಂಡಕ್ಟರ್ ಮುನಿರಾಜು ಎಂಬುವರ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಬಿಎಂಟಿಸಿ ಸಿಬ್ಬಂದಿ ಸೋಮವಾರ ಬೆಳಗ್ಗೆಯಿಂದ ದಿಢೀರನೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮುನಿರಾಜು ಮುಖಕ್ಕೆ, ಕೈಗೆ ಗಾಯಗಳಾಗಿವೆ. ಈ ಬಗ್ಗೆ ಪೊಲೀಸರಿಗೆ ತಕ್ಷಣ ದೂರು ನೀಡಲಾಯಿತು. ಆದರೆ ಪೊಲೀಸರು ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೆ ಹಾಗೆಯೇ ಬಿಟ್ಟು ಕಳಿಸಿದ್ದಾರೆ ಎಂದು ಸಿಬ್ಬಂದಿ ಸಿಟ್ಟಿಗೆದ್ದಿದ್ದಾರೆ.
ಯಲಹಂಕ ಬಸ್ ಡಿಪೊ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು, ಸಿಬ್ಬಂದಿ ಧರಣಿ ನಡೆಸುತ್ತಿದ್ದಾರೆ. ಸದ್ಯಕ್ಕೆ ಸಿಬ್ಬಂದಿಯ ಬೇಡಿಕೆಗೆ ಯಾವುದೇ ಪ್ರತಿಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಬಸ್ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.












Click it and Unblock the Notifications