ನ್ಯಾಶಿವರಾಜ್ ಪಾಟೀಲ್ ಮನೆಯಲ್ಲಿ ಚಿನ್ನಬೆಳ್ಳಿ ಕಳವು

ಇಂತಹ ಕಳ್ಳತನ ಪ್ರಕರಣ ನಗರದಲ್ಲಿ ಕಳೆದ ವಾರ (ಜ.20) ನಡುರಾತ್ರಿ ನಡೆದಿದೆ. ಅದೂ ಮಾಜಿ ಲೋಕಾಯುಕ್ತ ನ್ಯಾ ಶಿವರಾಜ್ ಪಾಟೀಲ್ ಅವರ ಮನೆಯಲ್ಲಿ ನಡೆದಿದೆ! ಕುಟುಂಬದ ಪರಿಚಯಸ್ಥರೇ ಕಳ್ಳತನ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸದಾಶಿವನಗರದ ಏಳನೆ ಮುಖ್ಯರಸ್ತೆಯ 8ನೆ ಕ್ರಾಸ್ ನಲ್ಲಿರುವ ನ್ಯಾ ಶಿವರಾಜ್ ಪಾಟೀಲ್ ಮನೆಯ ಕಿಟಕಿ ಕಂಬಿ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ದೇವರ ಕೋಣೆಯಲ್ಲಿದ್ದ ದೇವರ ವಿಗ್ರಹ ಸೇರಿದಂತೆ ಸುಮಾರು 6 ಕೆ.ಜಿ. ತೂಕದ ಚಿನ್ನ-ಬೆಳ್ಳಿಯ ವಸ್ತುಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಶಿವರಾಜ್ ಪಟೇಲ್ ಅವರ ಸೊಸೆ ಮೀನಾ ಅವರು ಇದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ನ್ಯಾ ಶಿವರಾಜ್ ಪಟೇಲ್, ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರೆಲ್ಲಾ ಮನೆಯಲ್ಲಿದ್ದಾಗಲೇ ಈ ಕೃತ್ಯ ನಡೆದಿರುವುದು ಸೋಜಿಗ ಮೂಡಿಸಿದೆ. ಅಲ್ಲದೆ ಮನೆಯ ಹೊರಗಡೆ ಖಾಸಗಿ ಕಾವಲುಗಾರ ಇದ್ದು, ಕಳ್ಳರು ಹಿತ್ತಲು ಭಾಗದಿಂದ ಮನೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚುಗಾರರು ಆಗಮಿಸಿ ತಪಾಸಣೆ ನಡೆಸಿದರು.












Click it and Unblock the Notifications