ಅಕ್ರಮ ಗಣಿಗಾರಿಕೆ: ಕೃಷ್ಣ-ಸ್ವಾಮಿಗೆ ಬಂಧನ ಭೀತಿ?

ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಟಿಜೆ ಅಬ್ರಹಾಂ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಅವರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ತನಿಖೆಗೆ ನ್ಯಾ. ಸುಧೀಂದ್ರರಾವ್ ಅವರು ಆದೇಶಿಸಿದ್ದರು.
ಮೂವರು ಮಾಜಿ ಸಿಎಂಗಳು ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೊಕ್ಕಿದ್ದರು.
ಈ ಮಧ್ಯೆ ತನಿಖಾ ವರದಿಯನ್ನು ಫೆ.2ರೊಳಗೆ ಲೋಕಾಯುಕ್ತ ಎಸ್ ಪಿ ಜಗದೀಶ್ ಗೆ ಕೋರ್ಟ್ ಆದೇಶ ನೀಡಿತ್ತು. ಈ ನಡುವೆ ಮಾಜಿ ಸಿಎಂ ಧರಂ ಸಿಂಗ್ ಅವರು ತಮ್ಮ ಮೇಲ್ಮನವಿಯನ್ನು ಇತ್ತೀಚೆಗೆ ಹಿಂಪಡೆದಿದ್ದರು.
ಹೀಗಾಗಿ ಎಸ್ ಎಂ ಕೃಷ್ಣ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರ ಮೇಲಿನ ತನಿಖೆ, ಧರಂ ಸಿಂಗ್ ಅವರಿಗೂ ಅನ್ವಯವಾಗುವ ಲಕ್ಷಣಗಳಿದೆ.












Click it and Unblock the Notifications