ರೇಣುಕಾಚಾರ್ಯ ಟೆರರಿಸ್ಟ್!:ಸದಾನಂದ ಗೌಡ ಘೋಷಣೆ
ಬೆಂಗಳೂರು,
ಜ.20: ಮುಖ್ಯಮಂತ್ರಿ ಸದಾನಂದಗೌಡರು ಗುರುವಾರ ಸಂಪುಟ ಸಭೆಯಲ್ಲಿ ಭರ್ಜರಿಯಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಆದರೆ ಎದುರಾಳಿಗಳು ಸದಾನಂದರ ರೌದ್ರಾವತಾರ ಕಂಡು ಬೆಚ್ಚಿಬಿದ್ದು, ತಕ್ಷಣಕ್ಕೆ ಏನೂ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇದನ್ನೆಲ್ಲ ನೋಡಿದರೆ ಯಡಿಯೂರಪ್ಪ ಪಟಾಲಂ ಸದ್ಯೋಭವಿಷ್ಯತ್ತಿನಲ್ಲಿ ಸದಾನಂದರ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ ಎನ್ನಲಾಗಿದೆ. id="toptextpromo">ಸಂಪುಟ
ಸಭೆ ನಡೆದಿದ್ದಾಗ ಸಚಿವ ಎಂಪಿ ರೇಣುಕಾಚಾರ್ಯ ತಮ್ಮ ಎಂದಿನ ಶೈಲಿಯಲ್ಲಿ ಸದಾನಂದರನ್ನು ಎದುರು ಹಾಕಿಕೊಳ್ಳಲು ಹವಣಿಸಿದರು. ತಮ್ಮ ತಲೆಯಲ್ಲಿ ಅನಾದಿ ಕಾಲದಿಂದಲೂ ಕೊರೆಯುತ್ತಿದ್ದ ವಿಷಯವನ್ನು ತುಂಬಿದ ಸಭೆಯಲ್ಲಿ ನೇರವಾಗಿ ಮುಖ್ಯಮಂತ್ರಿಯನ್ನು ಕೇಳಿಯೇ ಬಿಟ್ಟರು- 'ಮಹಾಸ್ವಾಮಿ ತಾವು ಅಂದು ಬಳ್ಳಾರಿಯಲ್ಲಿ ನಟಿ ಹೇಮಮಾಲಿನಿ ಅವರಿಗೆ ನನ್ನನನ್ನು ಪರಿಚಯಿಸುತ್ತಾ ಇವರು ರೇಣುಕಾಚಾರ್ಯ ಅಂತ ಇವರೊಬ್ಬ ಟೆರರಿಸ್ಟ್ ಎಂದಿದ್ದು ಸರೀನಾ' ಎಂದು ಚಿಕ್ಕ ಮಕ್ಕಳಂತೆ ಗೊಳೋ ಎಂದರು. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ತಮ್ಮ ಎಂದಿನ ಕೋಲ್ಗೇಟ್ ನಗೆ ಚೆಲ್ಲಿದ ಸದಾನಂದರು, 'ಅಯ್ಯೋ ಮಂಕೇ. ಅದು ಟೀಕೆ ಅಲ್ಲ. ಹಾಸ್ಯ ಚಟಾಕಿ. ತಮಾಷಿ ಯಾವುದು ಅಂತ ನಿನಗೆ ಗೊತ್ತಾಗೋಲ್ವಾ. ಸರಿ ಬಿಡು, ತಮಾಷಿ ಬೇಡ ಅಂದರೆ ನನಗೇನಂತೆ. ಈಗ ನಮ್ಮ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವಾಗಲೂ ಉಗ್ರಗಾಮಿ ಗುಂಪಿನ ನಾಯಕ ಎನ್ನುತ್ತಿರುತ್ತೇನೆ. ಕಾರಣ ಅವರ ಬಳಿ ಸದಾ 8-10 ಶಾಸಕರು ಇರುತ್ತಾರೆ. ಆದರೆ ಅವರು ಎಂದೂ ನನ್ನ ವಿರುದ್ಧ ಹೇಳಿಕೆ ನೀಡಿಲ್ಲ' ಎಂದು ಪರೋಕ್ಷವಾಗಿ ರೇಣುಕಾಗೆ ಬಾಣಬಿಟ್ಟರು.











Click it and Unblock the Notifications