ಕಣಕ್ಕಿಳಿದರೂ ಉಮಾ, ಮುಖ್ಯಮಂತ್ರಿ ಅಭ್ಯರ್ಥಿಯಲ್ಲ?

ಮಹೊಬಾ ಜಿಲ್ಲೆಯ ಚರ್ಕರಿ ವಿಧಾನಸಭಾ ಕ್ಷೇತ್ರದಿಂದ ಉಮಾ ಭಾರತಿ ಕಣಕ್ಕಿಳಿಯಲಿದ್ದಾರೆ. ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಉಮಾ ಅವರಿಗೆ ಯಾವ ಆಶ್ವಾಸನೆ ನೀಡಿ ಟಿಕೇಟ್ ನೀಡಿದೆ ಎಂಬುದು ಇನ್ನೂ ಕುತೂಹಲವಾಗಿ ಉಳಿದಿದೆ.
ರಾಜನಾಥ್ ಸಿಂಗ್, ಸೂರ್ಯ ಪ್ರತಾಪ್ ಸಾಹಿ ಹಾಗೂ ಕಲ್ ರಾಜ್ ಮಿಶ್ರಾ ಅವರು ಉಮಾ ಭಾರತಿ ಜೊತೆ ಮತಯಾಚಿಸಲಿದ್ದಾರೆ.
ಉತ್ತರ ಪ್ರದೇಶವನ್ನು 'ಉತ್ತಮ್ ಪ್ರದೇಶ' ಮಾಡುವುದಾಗಿ ಬಿಜೆಪಿ ಹೇಳಿಕೊಂಡಿದೆ. ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದೆ.
ಹಿಂದುಳಿದ ವರ್ಗಕ್ಕೆ ಶಿಕ್ಷಣ, ಉದ್ಯೋಗ ನೀಡುವ ಮಾಮೂಲಿ ಆಶ್ವಾಸನೆಗಳನ್ನು ಹೊತ್ತು ಉಮಾಜೀ ಮತಯಾಚಿಸಲಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ, ಉಮಾ ಅವರಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ಮಾತ್ರ ಬಿಜೆಪಿ ಚಕಾರ ಎತ್ತಿಲ್ಲ.(ಪಿಟಿಐ)












Click it and Unblock the Notifications