ಸಲ್ಮಾನ್ ನಂತರ ಸಂಜಯ್ ದತ್ ಗೆ ಕಾಂಗ್ರೆಸ್ ಗಾಳ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಸಲ್ಮಾನ್ ಖಾನ್ ಕರೆತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಈಗ ಸಂಜಯ್ ದತ್ ಅವರು ಕಾಂಗ್ರೆಸ್ ಪರ ಪ್ರಚಾರಕ್ಕೆ ನಾನು ಕೂಡಾ ರೆಡಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದ್ದಾರೆ.
ಸಮಾಜವಾದಿ ಪಕ್ಷ ಸೇರಿ ನಾನು ತಪ್ಪು ಮಾಡಿದೆ. ನನಗೆ ಮೊದಲಿನಿಂದಲೂ ಕಾಂಗ್ರೆಸ್ ಮೇಲೆ ಒಲವು ಎಂದು ಸಂಜಯ್ ದತ್ ಹೇಳಿಕೊಂಡಿದ್ದಾರೆ.
ಪಂಡಿತ್ ಜವಾಹರ್ ಲಾಲ್ ನೆಹರೂ ಚಿಂತನೆಯನ್ನು ನಮ್ಮ ಅಪ್ಪ ಸುನೀಲ್ ದತ್ ಬಹುವಾಗಿ ಮೆಚ್ಚಿಕೊಂಡಿದ್ದರು. ಯುಪಿಎ ಸರ್ಕಾರ 2004-2005ರಲ್ಲಿ ಅಧಿಕಾರದಲ್ಲಿದ್ದಾಗ ಕ್ರೀಡಾ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ಸುನೀಲ್ ದತ್ ನಿಧನ ನಂತರ 2009ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್, ಒಂದು ವರ್ಷ ಬಳಿಕ ಪಕ್ಷ ತೊರೆದಿದ್ದರು.
ಈಗ ಉತ್ತರ ಪ್ರದೇಶ ಜತೆಗೆ ನಾನು ಏನಾದರೂ ಸೇವೆ ಸಲ್ಲಿಸಬೇಕು. ಅದಕ್ಕೆ ಕಾಂಗ್ರೆಸ್ ಪಕ್ಷದ ಮೂಲಕ ಸಿಗುವ ಅವಕಾಶಕ್ಕಾಗಿ ಕಾದಿದ್ದೇನೆ ಎಂದು ಸಂಜಯ್ ಹೇಳಿದ್ದಾರೆ.












Click it and Unblock the Notifications